
ಪಿಟಿಐ
ಭಾರತ– ಬಾಂಗ್ಲಾ (ಪ್ರಾತಿನಿಧಿಕ ಚಿತ್ರ)
ನವದೆಹಲಿ: ಬಾಂಗ್ಲಾದೇಶದ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿ ನಿಯೋಜಿಸಲಾದ ಅಧಿಕಾರಿಗಳ ಕುಟುಂಬಗಳಿಗೆ ತವರಿಗೆ ವಾಪಸಾಗುವಂತೆ ಭಾರತ ಮಂಗಳವಾರ ಸಲಹೆ ನೀಡಿದೆ.
ಬಾಂಗ್ಲಾದೇಶದಲ್ಲಿ ಸಂಸತ್ ಚುನಾವಣೆಗೆ ಒಂದು ವಾರವಿದ್ದು, ಅದಕ್ಕೂ ಮುಂಚೆ ಭಾರತ ಈ ನಿರ್ಧಾರ ಕೈಗೊಂಡಿದೆ. ಆದಾಗ್ಯೂ, ರಾಜತಾಂತ್ರಿಕರ ಕುಟುಂಬದವರು ಮತ್ತು ಇತರ ಅಧಿಕಾರಿಗಳು ಯಾವಾಗ ಭಾರತಕ್ಕೆ ಮರಳುತ್ತಾರೆ ಎಂದು ಇನ್ನೂ ತಿಳಿದುಬಂದಿಲ್ಲ.
ತೀವ್ರಗಾಮಿ ಚಟುವಟಿಕೆ ಹೆಚ್ಚುತ್ತಿರುವ ಕಾರಣ ಬಾಂಗ್ಲಾದೇಶವನ್ನು ಭಾರತೀಯ ಅಧಿಕಾರಿಗಳ ಮತ್ತು ರಾಜತಾಂತ್ರಿಕರ ಕುಟುಂಬಗಳು ಇಲ್ಲದ ಸ್ಥಳವಾಗಿ ಮಾಡಲು ಭಾರತ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.