
ಆಗ್ರಾ (ಉತ್ತರ ಪ್ರದೇಶ): ಎಂಟು ಮಕ್ಕಳು ಸೇರಿದಂತೆ 38 ಬಾಂಗ್ಲಾದೇಶದ ಪ್ರಜೆಗಳನ್ನು ಶನಿವಾರ ಆಗ್ರಾದಿಂದ ಗಡಿಪಾರು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘2022ರ ಫೆ.5ರಂದು ಸಿಕಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಸೆಕ್ಟರ್ 15ರಲ್ಲಿ 38 ಮಂದಿ ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿತ್ತು. ಇವರಲ್ಲಿ ಎಂಟು ಮಕ್ಕಳು ಮತ್ತು 30 ಮಂದಿ ವಯಸ್ಕರು ಇದ್ದರು. ಇಷ್ಟೂ ಜನರಲ್ಲಿ ವಾಸಸ್ಥಳ ದೃಢೀಕರಿಸುವ ಯಾವುದೇ ದಾಖಲೆಗಳಿರಲಿಲ್ಲ. ಹೀಗಾಗಿ ಅಕ್ರಮ ವಾಸದ ಆರೋಪದ ಮೇಲೆ ಪೊಲೀಸರು ಇವರನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ನ್ಯಾಯಾಲಯವು ವಿದೇಶಿಯರ ಕಾಯ್ದೆಯಡಿ ಶಿಕ್ಷೆ ವಿಧಿಸಿತ್ತು’ ಎಂದು ಗುಪ್ತಚರ ವಿಭಾಗದ ಎಸಿಪಿ ದಿನೇಶ್ ಸಿಂಗ್ ವಿವರಿಸಿದರು.
‘ಶಿಕ್ಷೆಯ ಅವಧಿ ಮುಗಿದಿರುವುದರಿಂದ ಅವರನ್ನು ಶನಿವಾರ ವಾಹನಗಳ ಮೂಲಕ ಬಾಂಗ್ಲಾದೇಶ ಗಡಿಗೆ ಕಳುಹಿಸಲಾಯಿತು. ಜನವರಿ 13ರಂದು ಅವರನ್ನು ಗಡಿ ಭದ್ರತಾ ಪಡೆಗೆ (ಬಿಎಸ್‌ಎಫ್) ಹಸ್ತಾಂತರಿಸಲಾಗುವುದು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.