ADVERTISEMENT

ಬಾಂಗ್ಲಾ: ಮಾಜಿ ಪ್ರಧಾನಿ ಜಿಯಾಗೆ ನವೀಕೃತ ಪಾಸ್‌ಪೋರ್ಟ್‌

ಪಿಟಿಐ
Published 7 ಆಗಸ್ಟ್ 2024, 16:20 IST
Last Updated 7 ಆಗಸ್ಟ್ 2024, 16:20 IST
ಖಲಿದಾ ಜಿಯಾ
ಖಲಿದಾ ಜಿಯಾ   

ಢಾಕಾ: ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾದ ಬೆನ್ನಲ್ಲೆ, ಜೈಲಿನಿಂದ ಬಿಡುಗಡೆಯಾಗಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲಿದಾ ಜಿಯಾ ಅವರಿಗೆ ನವೀಕೃತ ಪಾಸ್‌ಪೋರ್ಟ್‌ ನೀಡಲಾಗಿದೆ.

ಬಾಂಗ್ಲಾದೇಶ್‌ ನ್ಯಾಷನಲ್‌ ಪಾರ್ಟಿ(ಬಿಎನ್‌ಪಿ) ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದು, ಜಿಯಾ ಅವರ ನವೀಕೃತ ಪಾಸ್‌ಪೋರ್ಟ್‌ ಅನ್ನು ಮಂಗಳವಾರ ತಡರಾತ್ರಿ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿಪಕ್ಷ ಬಿಎನ್‌ಪಿ ಅಧ್ಯಕ್ಷರೂ ಆಗಿರುವ ಜಿಯಾ, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ 2018ರ ಫೆಬ್ರುವರಿ 8ರಿಂದ 17 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದರು. ಕ್ಷಿಪ್ರಕ್ರಾಂತಿಯ ಬಳಿಕ ಶೇಖ್‌ ಹಸೀನಾ ನೇತೃತ್ವದ ಸರ್ಕಾರ ಉರುಳಿಬಿದ್ದ ಬೆನ್ನಲ್ಲೆ ಜೈಲಿನಿಂದ ಮಂಗಳವಾರ ಬಿಡುಗಡೆಯಾಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.