ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ₹6 ಲಕ್ಷದಷ್ಟು ನಿಷೇಧಿತ ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಬಂಧಿತರಾದ ಮೊಹಮ್ಮದ್ ಅರ್ಜಾಬ್ ಜಮೀರುಲ್ ಹಕ್ (22) ಹಾಗೂ ದಿಲ್ಶಾದ್ ಶಂಶಾದ್ ಅಲಿ (20) ಉತ್ತರ ಪ್ರದೇಶದ ಪ್ರತಾಪ್‌ಗಢ ಮೂಲದ ಚಾಲಕರಾಗಿದ್ದಾರೆ. ನೆನರಾಮ್ ಚಭುಜಿ ಗುಜಾರ್ (48) ರಾಜಸ್ಥಾನದ ರಾಜಸಮಂದ್‌ನ ಉದ್ಯಮಿ ಎಂದು ವಿಚಾರಣೆಯಲ್ಲಿದೆ ತಿಳಿದು ಬಂದಿದೆ.
ಮಾಹಿತಿಯನ್ನು ಆಧರಿಸಿ ಶೋಧ ನಡೆಸಿದ ಪೊಲೀಸರಿಗೆ ತಲಸಾರಿಯ ಧಾಬಾ ಬಳಿ ನಿಲ್ಲಿಸಿದ್ದ ಟೆಂಪೋದಲ್ಲಿ ನಿಷೇಧಿತ ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳು ಪತ್ತೆಯಾಗಿವೆ. ಈ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಸಾಗಿಸುತ್ತಿದ್ದ ನಿಷೇಧಿತ ಸರಕುಗಳನ್ನು ಎಲ್ಲಿಂದ ಖರೀದಿಸಿದ್ದರು ಹಾಗೂ ಎಲ್ಲಿಗೆ ಸಾಗಿಸುತ್ತಿದ್ದರು ಎಂದು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.