ADVERTISEMENT

ನ್ಯಾಯಾಲಯದ ಆವರಣದಲ್ಲೇ ಉತ್ತರ ಪ್ರದೇಶದ ಬಾರ್ ಕೌನ್ಸಿಲ್ ಅಧ್ಯಕ್ಷೆ ಗುಂಡೇಟಿಗೆ ಬಲಿ

ಏಜೆನ್ಸೀಸ್
Published 12 ಜೂನ್ 2019, 14:12 IST
Last Updated 12 ಜೂನ್ 2019, 14:12 IST
   

ಆಗ್ರಾ: ಉತ್ತರ ಪ್ರದೇಶದ ಬಾರ್ ಕೌನ್ಸಿಲ್‌ನ ನೂತನ ಅಧ್ಯಕ್ಷೆ ದರ್ವೇಶ್ ಯಾದವ್ ಅವರನ್ನು ಜತೆಗಿದ್ದ ನ್ಯಾಯವಾದಿಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬುಧವಾರ ನಡೆದಿದೆ. ಆಗ್ರಾ ಸಿವಿಲ್ ಕೋರ್ಟ್ಆವರಣದಲ್ಲೇ ಈ ಕೃತ್ಯ ನಡೆದಿದೆ.

ಎರಡು ದಿನಗಳ ಹಿಂದೆಯಷ್ಟೇ ದರ್ವೇಶ್ ಯಾದವ್ಬಾರ್ ಕೌನ್ಸಿಲ್ ಅಧ್ಯಕ್ಷೆಯಾಗಿ ನೇಮಕವಾಗಿದ್ದರು. ನ್ಯಾಯಾಲಯದಲ್ಲಿ ಅಧ್ಯಕ್ಷೆಯ ಸ್ವಾಗತ ಕಾರ್ಯಕ್ರಮದ ವೇಳೆ ನ್ಯಾಯವಾದಿ ಮನೀಶ್ ಎಂಬಾತ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

45 ನಿಮಿಷಗಳ ಹಿಂದೆಯಷ್ಟೇ ದರ್ವೇಶ್ ಅವರ ಹತ್ಯೆ ನಡೆದಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ನ್ಯಾಯಾಲಯದಲ್ಲಿ ಆಕೆಗೆ ಸ್ವಾಗತ ಕೋರುವ ಕಾರ್ಯಕ್ರಮ ನಡೆಯುತ್ತಿದ್ದಾಗ ನ್ಯಾಯವಾದಿ ಮನೀಶ್ ಗುಂಡು ಹಾರಿಸಿದ್ದಾರೆ.ಆಕೆಯ ದೇಹಕ್ಕೆ ಮೂರು ಗುಂಡು ತಾಗಿದೆ.ಆಕೆಯನ್ನು ತಕ್ಷಣವೇ ಪುಷ್ಪಾಂಜಲಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ನಿರ್ದೇಶಕ ಅಜಯ್ ಆನಂದ್ ಹೇಳಿದ್ದಾರೆ.

ADVERTISEMENT

ದರ್ವೇಶ್ ಯಾದವ್ ಅವರ ಮೇಲೆ ಗುಂಡು ಹಾರಿಸಿದ ನಂತರ ಮನೀಶ್ ತಮ್ಮ ಮೇಲೆಯೇ ಗುಂಡು ಹಾರಿಸಿಕೊಂಡಿದ್ದಾರೆ.ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ ಪೊಲೀಸರು.

ಉತ್ತರ ಪ್ರದೇಶದ ಬಾರ್ ಕೌನ್ಸಿಲ್‌ನಲ್ಲಿ ಅಧ್ಯಕ್ಷೆ ಸ್ಥಾನಕ್ಕೇರಿದ ಮೊದಲ ಮಹಿಳೆ ಆಗಿದ್ದಾರೆ ದರ್ವೇಶ್ ಯಾದವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.