ADVERTISEMENT

ವಿದ್ಯುತ್ ಚಾಲಿತ ವಾಹನಗಳಿಗೆ ಹಸಿರು ನಂಬರ್ ಪ್ಲೇಟ್‌ಗಳು...

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2018, 19:54 IST
Last Updated 11 ಆಗಸ್ಟ್ 2018, 19:54 IST
ಇ–ಕಾರ್‌
ಇ–ಕಾರ್‌   

ನವದೆಹಲಿ:ವಿದ್ಯುತ್ ಚಾಲಿತ ವಾಹನಗಳಲ್ಲಿ ಇನ್ನು ಮುಂದೆ ಹಸಿರು ಬಣ್ಣದ ನಂಬರ್‌ ಪ್ಲೇಟ್‌ಗಳನ್ನು ಬಳಸಬಹುದು.

‘ವಿದ್ಯುತ್ ಚಾಲಿತ ಮತ್ತು ಮಾಲಿನ್ಯರಹಿತ ವಾಹನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕ್ರಮ ತೆಗದುಕೊಂಡಿದ್ದೇವೆ. ಇಂತಹ ವಾಹನಗಳಿಗೆ ಕೆಲವಾರು ವಿನಾಯಿತಿಗಳನ್ನು ನೀಡಲಾಗುತ್ತದೆ. ವಿಭಿನ್ನವಾದ ನಂಬರ್ ಪ್ಲೇಟ್ ಇದ್ದರೆ, ದಟ್ಟಣೆಯಲ್ಲೂ ಈ ವಾಹನಗಳನ್ನು ಗುರುತಿಸಲು ಅನುಕೂಲವಾಗುತ್ತದೆ’ ಎಂದುರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

ವಿನಾಯಿತಿಗಳು

ADVERTISEMENT

* ಪಾರ್ಕಿಂಗ್ ಪ್ರದೇಶದಲ್ಲಿ ಆದ್ಯತೆ ಮೇರೆಗೆ ಪಾರ್ಕಿಂಗ್ ಒದಗಿಸಲಾಗುತ್ತದೆ

* ನಿರ್ಬಂಧಿತ ಪ್ರದೇಶಗಳಲ್ಲಿ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ

* ಹೆದ್ದಾರಿ ಬಳಕೆ ಶುಲ್ಕದಲ್ಲೂ (ಟೋಲ್) ರಿಯಾಯಿತಿ ನೀಡಲಾಗುತ್ತದೆ

ವಾಣಿಜ್ಯ ಬಳಕೆ ವಾಹನಗಳು

ಹಸಿರು ಬಣ್ಣದ ಫಲಕ (ಪ್ಲೇಟ್)

ಹಳದಿ ಬಣ್ಣದ ಸಂಖ್ಯೆ

ಖಾಸಗಿ ವಾಹನಗಳು (ಸ್ವಂತ ಬಳಕೆ ವಾಹನಗಳು)

ಹಸಿರು ಬಣ್ಣದ ಫಲಕ (ಪ್ಲೇಟ್)

ಬಿಳಿ ಬಣ್ಣದ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.