ADVERTISEMENT

ಭಾರತದ ಸಮಗ್ರತೆಗೆ ಧಕ್ಕೆ ತರುವ ಸಂಗತಿಗಳ ಬಗ್ಗೆ ಎಚ್ಚರ ಇರಲಿ: ಅನುರಾಗ್‌ ಠಾಕೂರ್

ಪಿಟಿಐ
Published 18 ಮಾರ್ಚ್ 2023, 10:31 IST
Last Updated 18 ಮಾರ್ಚ್ 2023, 10:31 IST
ಅನುರಾಗ್‌ ಠಾಕೂರ್‌
ಅನುರಾಗ್‌ ಠಾಕೂರ್‌   

ಕೊಚ್ಚಿ: ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಧ್ಯಮದವರು ಜಾಗರೂಕರಾಗಿರಬೇಕು ಮತ್ತು ರಾಷ್ಟ್ರದ ಸಮಗ್ರತೆಗೆ ಧಕ್ಕೆ ತರುವಂತಹ ಸುದ್ದಿಗಳನ್ನು ಪ್ರಸಾರ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್ ತಿಳಿಸಿದ್ದಾರೆ.

ಮಲಯಾಳಂನ ಖ್ಯಾತ ದಿನಪತ್ರಿಕೆ ‘ಮಾತೃಭೂಮಿ’ಯ ಶತಮಾನೋತ್ಸವ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ‘ದೇಶದ ಒಳಗೆ ಮತ್ತು ಹೊರಗೆ ನೀಡಲಾಗುವ ತರ್ಕಬದ್ಧವಲ್ಲದ ಹೇಳಿಕೆಗಳಿಂದ ದೇಶದ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

‘ಭಾರತದ ಸಮಗ್ರತೆಗೆ ಧಕ್ಕೆ ತರುವಂತಹ ಧ್ವನಿಗಳು ಮತ್ತು ಸುದ್ದಿಗಳಿಗೆ ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಲ್ಲದೆಯೂ ಅವಕಾಶ ನೀಡದೆ ಮಾಧ್ಯಮದವರು ಜಾಗರೂಕರಾಗಿರಬೇಕೆಂದು ನಾನು ಒತ್ತಾಯಿಸುತ್ತೇನೆ’ ಎಂದಿದ್ದಾರೆ.

ADVERTISEMENT

ಸತ್ಯ ಯಾವಾಗಲೂ ಪವಿತ್ರವಾಗಿರುತ್ತದೆ ಮತ್ತು ಹೇಳಿಕೆಗಳು ಯಾವಾಗಲೂ ಮುಕ್ತವಾಗಿರಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.