ADVERTISEMENT

ದೇಶವಿರೋಧಿ ಶಕ್ತಿಗಳಿಂದ ಕೋವಿಡ್‌ ಪರಿಸ್ಥಿತಿ ದುರ್ಬಳಕೆ: ಆರ್‌ಎಸ್‌ಎಸ್‌ ಎಚ್ಚರಿಕೆ

ಪಿಟಿಐ
Published 24 ಏಪ್ರಿಲ್ 2021, 12:58 IST
Last Updated 24 ಏಪ್ರಿಲ್ 2021, 12:58 IST
ದತ್ತಾತ್ರೇಯ ಹೊಸಬಾಳೆ
ದತ್ತಾತ್ರೇಯ ಹೊಸಬಾಳೆ   

ನವದೆಹಲಿ: ವಿನಾಶಕಾರಿ ಹಾಗೂ ಭಾರತ ವಿರೋಧಿ ಶಕ್ತಿಗಳ ಬಗ್ಗೆ ಜನರು ಎಚ್ಚರದಿಂದಿರಬೇಕು. ದೇಶವನ್ನು ಬಾಧಿಸುತ್ತಿರುವ ಕೋವಿಡ್‌–19 ಪಿಡುಗಿನ ಸಂಕಷ್ಟದ ಸಮಯವನ್ನು ಈ ಶಕ್ತಿಗಳು ದುರ್ಬಳಕೆಗೆ ಪಿತೂರಿ ನಡೆಸುವ ಸಾಧ್ಯತೆಗಳಿವೆ ಎಂದು ಆರ್‌ಎಸ್‌ಎಸ್‌ ಶನಿವಾರ ಹೇಳಿದೆ.

‘ಕೋವಿಡ್‌–19ನ ಎರಡನೇ ಅಲೆಯ ಸಮಯದಲ್ಲಿ ಈ ಶಕ್ತಿಗಳು ದೇಶದಲ್ಲಿ ನಕಾರಾತ್ಮಕ ಹಾಗೂ ಅಪನಂಬಿಕೆಯ ವಾತಾವರಣ ಸೃಷ್ಟಿಸಲೂ ಯತ್ನಿಸುತ್ತವೆ’ ಎಂದು ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಸದ್ಯದ ಸನ್ನಿವೇಶ ಒಡ್ಡಿರುವ ಸವಾಲುಗಳನ್ನು ಎದುರಿಸಲು ಸಂಘಟನೆಯ ಕಾರ್ಯಕರ್ತರು, ಸಾಮಾಜಿಕ ಹಾಗೂ ಧಾರ್ಮಿಕ ಸಂಸ್ಥೆಗಳು ಸಜ್ಜಾಗಬೇಕು’ ಎಂದಿದ್ದಾರೆ.

ADVERTISEMENT

‘ಮಾಧ್ಯಮಗಳೂ ಸೇರಿದಂತೆ ಸಮಾಜದ ಎಲ್ಲ ವರ್ಗಗಳು ಸಮಾಜದಲ್ಲಿ ಸಕಾರಾತ್ಮಕತೆ, ಭರವಸೆ ಹಾಗೂ ಅಪನಂಬಿಕೆ ದೂರ ಮಾಡುವಂಥ ವಾತಾವರಣ ನಿರ್ಮಿಸಲು ಶ್ರಮಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

‘ಕೋವಿಡ್‌–19 ಪಿಡುಗಿನ ಈ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ, ಅನಿಸಿಕೆ ಹಂಚಿಕೊಳ್ಳುವವರು ಹೆಚ್ಚು ಸಂಯಮ ಹಾಗೂ ಜಾಗರೂಕರಾಗಿರಬೇಕು’ ಎಂದೂ ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.