ADVERTISEMENT

ಸ್ಥಳೀಯಾಡಳಿತ: ವಿಪಕ್ಷಗಳನ್ನು ಕಿತ್ತೊಗೆದ ಟಿಎಂಸಿ

ಪಶ್ಚಿಮ ಬಂಗಾಳ ನಗರಸಭೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 20:08 IST
Last Updated 2 ಮಾರ್ಚ್ 2022, 20:08 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷವು (ಟಿಎಂಸಿ)
102 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಭಾರಿ ಜಯ ಸಾಧಿಸಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿ
ತಿಳಿಸಿದ್ದಾರೆ.

ರಾಜ್ಯದ 108 ನಗರ ಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.ಬಿಜೆಪಿ ಯಾವುದೇ ಸ್ಥಾನ ಗೆದ್ದಿಲ್ಲ. ಕಾಂಗ್ರೆಸ್‌ ಕೂಡ ಒಂದೂ ಸ್ಥಾನ ಗೆದ್ದಿಲ್ಲ. 27 ನಗರಸಭೆಗಳ ಎಲ್ಲಾ ವಾರ್ಡ್‌ಗಳನ್ನು ಟಿಎಂಸಿ ಗೆಲ್ಲುವ ಮೂಲಕ, ಅಲ್ಲಿ ವಿರೋಧ ಪಕ್ಷವೇ ಇಲ್ಲದಂತಹ ಸ್ಥಿತಿಯನ್ನು ನಿರ್ಮಾಣವಾಗಿದೆ.

ಟಿಎಂಸಿ 102 ಸ್ಥಾನ, ಎಡರಂಗ ಒಂದು ಸ್ಥಾನ ಮತ್ತು ಹಮ್ರೊ ಪಕ್ಷ ಒಂದು ಸ್ಥಾನ ಗೆದ್ದಿದೆ. ನಾಲ್ಕು ನಗರ ಸಭೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.ಬಿಜೆಪಿಯ ಪ್ರಮುಖ ನಾಯಕ, ನಂದಿಗ್ರಾಮದ ಶಾಸಕ ಸವೇಂಧು ಅಧಿಕಾರಿ ಅವರ ಭದ್ರಕೋಟೆ ಕಾಂತಿ ನಗರ ಸಭೆಯಲ್ಲೂ ಟಿಎಂಸಿ ಜಯಗಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.