ADVERTISEMENT

ಪ.ಬಂಗಾಳ | ಕಣ್ಮುಚ್ಚಿಕೊಂಡು ಕೂತಿರಲು ಸಾಧ್ಯವಿಲ್ಲ ಎಂದ HC: ಕೇಂದ್ರ ಪಡೆ ನಿಯೋಜನೆ

ಪಿಟಿಐ
Published 12 ಏಪ್ರಿಲ್ 2025, 15:45 IST
Last Updated 12 ಏಪ್ರಿಲ್ 2025, 15:45 IST
<div class="paragraphs"><p>ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯ ಜಾಂಗಿರ್‌ಪುರ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಸುಟ್ಟು ಕರಕಲಾಗಿರುವ ಸಾರಿಗೆ ಬಸ್‌</p></div>

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯ ಜಾಂಗಿರ್‌ಪುರ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಸುಟ್ಟು ಕರಕಲಾಗಿರುವ ಸಾರಿಗೆ ಬಸ್‌

   

ಪಿಟಿಐ ಚಿತ್ರ

ಕೋಲ್ಕತ್ತ: ‘ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಇಬ್ಬರ ಸಾವಿಗೆ ಕಾರಣವಾಗಿರುವ ಹಿಂಸಾಚಾರವನ್ನು ಕಂಡೂ ಕಾಣದಂತೆ ಕುಳಿತಿರಲು ಸಾಧ್ಯವಿಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿರುವ ಕಲ್ಕತ್ತ ಹೈಕೋರ್ಟ್‌, ಕೇಂದ್ರ ಪಡೆಯ ನಿಯೋಜನೆಗೆ ಶನಿವಾರ ಆದೇಶಿಸಿದೆ.

ADVERTISEMENT

ವಕ್ಫ್‌ ತಿದ್ದುಪಡಿ ಕಾನೂನು ವಿರೋಧಿಸಿ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆದಿತ್ತು. ಅದು ಹಿಂಸಾಚಾರ ಸ್ವರೂಪ ಪಡೆದಿದ್ದು, ದುಷ್ಕರ್ಮಿಗಳು ಇಬ್ಬರನ್ನು ಚಾಕು ಚುಕ್ಕಿ ಕೊಂದಿದ್ದಾರೆ. ವ್ಯಕ್ತಿ ಮೇಲೆ ಗುಂಡಿನ ದಾಳಿ ನಡೆದಿದೆ. 

'ನಾಗರಿಕರಿಗೆ ಸೂಕ್ತ ಭದ್ರತೆ ಮತ್ತು ರಕ್ಷಣೆ ನೀಡಬೇಕಾದ್ದು ಸರ್ಕಾರದ ಕರ್ತವ್ಯ. ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾ. ಸೌಮೆನ್ ಸೇನ್‌ ಮತ್ತು ನ್ಯಾ. ರಾಜಾ ಬಸು ಚೌಧರಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

‘ಮುರ್ಷಿದಾಬಾದ್‌ನಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯನ್ನು ನಿಯೋಜಿಸಿ, ಪ್ರದೇಶದಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಳ್ಳಬೇಕು. ರಾಜ್ಯದ ಆಡಳಿತದೊಂದಿಗೆ ಕೇಂದ್ರ ಪಡೆ ಕಾರ್ಯ ನಿರ್ವಹಿಸಬೇಕು. ಪ್ರಕರಣ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಸ್ತೃತ ವರದಿ ಸಲ್ಲಿಸಬೇಕು. ಏ. 17ರಂದು ಮುಂದಿನ ವಿಚಾರಣೆ ನಡೆಸಲಾಗುವುದು’ ಎಂದು ಪೀಠ ನಿರ್ದೇಶಿಸಿತು.

ವಿರೋಧ ಪಕ್ಷದ ನಾಯಕ ಸುವೇಂಧು ಅಧಿಕಾರಿ ಸಲ್ಲಿಸಿದ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸುವಂತೆ ಸೂಚಿಸಿ ಮುಖ್ಯ ನ್ಯಾಯಮೂರ್ತಿ ಅವರು ವಿಭಾಗೀಯ ಪೀಠ ರಚಿಸಿದ್ದರು. 

ಪೀಠದ ಆದೇಶದಂತೆ ಬಿಎಸ್‌ಎಫ್‌ನ ಎಂಟು ತುಕಡಿಗಳನ್ನು ಸರ್ಕಾರ ನಿಯೋಜಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.