ADVERTISEMENT

ಪಶ್ಚಿಮ ಬಂಗಾಳ: ಹಯಸಿಂತ್ ಹೂವಿನಿಂದ ಪರಿಸರ ಸ್ನೇಹಿ ರಾಖಿ

ಪಿಟಿಐ
Published 3 ಆಗಸ್ಟ್ 2020, 8:12 IST
Last Updated 3 ಆಗಸ್ಟ್ 2020, 8:12 IST
ಹಯಸಿಂತ್ ಹೂವು  –ಟ್ವಿಟರ್‌ ಚಿತ್ರ
ಹಯಸಿಂತ್ ಹೂವು  –ಟ್ವಿಟರ್‌ ಚಿತ್ರ   

ಕೃಷ್ಣಗಂಜ್ ‌(ಪಶ್ಚಿಮ ಬಂಗಾಳ): ನಾಡಿಯಾ ಜಿಲ್ಲೆಯ ಸರ್ಕಾರೇತರ ಸಂಸ್ಥೆಯೊಂದರ ಮಹಿಳೆಯರು ನೀರಿನಲ್ಲಿ ಬೆಳೆಯುವ ಹಯಸಿಂತ್ ಹೂವಿನಿಂದ ಪರಿಸರ ಸ್ನೇಹಿ ರಾಖಿ ತಯಾರಿಸಿದ್ದಾರೆ.

ಇಂತಹ ರಾಖಿ ಇದೇ ಮೊದಲ ಬಾರಿ ತಯಾರಿಸಲಾಗಿದೆ.ರಾಖಿಗೆ ಬಳಸಲಾದ ಬಣ್ಣಗಳಲ್ಲಿಯೂ ಯಾವುದೇ ರಾಸಾಯನಿಕಗಳಿಲ್ಲ ಎಂದು 'ಇಕೊ ಕ್ರಾಫ್ಟ್‌’ ಸಂಸ್ಥೆಯ ಪರಿಸರ ಸ್ನೇಹಿ ಕರಕುಶಲ ವಿಭಾಗದ ಕಾರ್ಯದರ್ಶಿ ಸ್ವಪನ್‌ ಬೌಮಿಕ್‌ ತಿಳಿಸಿದ್ದಾರೆ.

ಮಜ್ದಿಯಾ ಪ್ರಾಂತ್ಯದಲ್ಲಿನಸ್ವಯಂ ಸೇವಾ ಸಂಘಟನೆಯ ಸದಸ್ಯರು ಈ ಮಾದರಿಯ 400ಕ್ಕೂ ಹೆಚ್ಚು ರಾಖಿಗಳನ್ನು ತಯಾರಿಸಿದ್ದಾರೆ. ಕುಶಲಕರ್ಮಿ ದೇವಶಿಶ್ ಬಿಸ್ವಾಸ್‌ ಅವರುಹಯಸಿಂತ್ ಹೂವಿನಿಂದ ರಾಖಿ ತಯಾರಿಸುವುದನ್ನು ಮಹಿಳೆಯರಿಗೆ ಕಲಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

2.5 ಅಡಿಯುಳ್ಳ ಹಯಸಿಂತ್ ಗಿಡಗಳನ್ನು ಮಾತ್ರ ರಾಖಿಗೆ ಬಳಸಲಾಗಿದೆ. ಗಿಡವನ್ನು ಶುಚಿಗೊಳಿಸಿ ಬಳಿಕ ಅದರ ಎಲೆ, ಕಾಂಡಗಳನ್ನು ಬೇರ್ಪಡಿಸಿ ಒಣಗಿಸಲಾಗುತ್ತದೆ. ಬಳಿಕ ಕಾಂಡಗಳ ನಾರನ್ನು ಬಳಸಿ ರಾಖಿಯನ್ನು ಸಿದ್ಧಗೊಳಿಸಲಾಗುತ್ತದೆ ಎಂದು ಬೌಮಿಕ್‌ ವಿವರಿಸಿದ್ದಾರೆ.

ಹೂಗ್ಲಿ ಜಿಲ್ಲೆಯ ಬಂಡೆಲ್‌ನಲ್ಲಿ150 ರಾಖಿಗಳು ಮತ್ತು ನಾಡಿಯಾ ಜಿಲ್ಲೆಯಲ್ಲಿ150 ರಾಖಿಗಳನ್ನು ಮಾರಾಟ ಮಾಡಲಾಗಿದೆ. ರಾಖಿಯ ಗಾತ್ರದ ಆಧಾರದಲ್ಲಿ ₹5, ₹10 ಮತ್ತು 15 ರೂಪಾಯಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಭೌಮಿಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.