ADVERTISEMENT

ಬಂಗಾಳಿ ನಟಿ ಕೋಯಲ್‌ ಮಲಿಕ್‌ಗೆ ಕೋವಿಡ್‌

ಪಿಟಿಐ
Published 11 ಜುಲೈ 2020, 6:18 IST
Last Updated 11 ಜುಲೈ 2020, 6:18 IST
ಬಂಗಾಳಿ ನಟಿ ಕೋಯಲ್ ಮಲಿಕ್
ಬಂಗಾಳಿ ನಟಿ ಕೋಯಲ್ ಮಲಿಕ್   

ಕೋಲ್ಕತ್ತ: ಬಂಗಾಳಿ ಚಿತ್ರನಟಿ ಕೋಯಲ್‌ ಮಲಿಕ್‌ ಹಾಗೂ ಅವರ ಕುಟುಂಬ ಸದಸ್ಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅವರ ಪತಿ ನಿಶ್ಪಾಲ್‌ ಸಿಂಗ್‌ ರಾಣೆ ಅವರು ಚಿತ್ರ ನಿರ್ಮಾಪಕ ಹಾಗೂ ತಂದೆ ರಂಜಿತ್‌ ಮಲಿಕ್‌ ಹಿರಿಯ ನಟರಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿಶುಕ್ರವಾರ ಒಂದೇ ದಿನ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. 1,198 ಹೊಸ ಪ್ರಕರಣಗಳೊಂದಿಗೆ ಅಲ್ಲಿ ಸೋಂಕಿತರ ಸಂಖ್ಯೆ 27,109ಕ್ಕೆ ತಲುಪಿದೆ. ಕೋವಿಡ್‌ನಿಂದಾಗಿ ಶುಕ್ರವಾರ 26 ಮಂದಿ ಬಲಿಯಾಗಿದ್ದು, ಈವರೆಗೆ 880 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೋವಿಡ್‌ನಿಂದಾಗಿಕೋಲ್ಕತ್ತ (13), ಉತ್ತರ 24 ಪರಗಣ (4), ಹೌರಾ (1), ಹೂಗ್ಲಿ (1), ಮಾಲ್ಡಾ(1) ಮತ್ತು ಮೇದಿನಿಪುರ (1) ಜನರು ಮೃತಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.