ADVERTISEMENT

ಮಧ್ಯಪ್ರದೇಶ | ಬೇತುಲ್ ಜಿಲ್ಲಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ರೋಗಿಗಳು ಸುರಕ್ಷಿತ

ಪಿಟಿಐ
Published 23 ನವೆಂಬರ್ 2025, 7:04 IST
Last Updated 23 ನವೆಂಬರ್ 2025, 7:04 IST
<div class="paragraphs"><p>ಸಾಂದರ್ಭಿಕ-ಚಿತ್ರ</p></div>

ಸಾಂದರ್ಭಿಕ-ಚಿತ್ರ

   

ಎ.ಐ ಚಿತ್ರ

ಬೇತುಲ್: ಮಧ್ಯಪ್ರದೇಶದ ಬೇತುಲ್ ಜಿಲ್ಲಾ ಆಸ್ಪತ್ರೆಯ ದಾಸ್ತಾನು ಕೊಠಡಿಯಲ್ಲಿ ಭಾನುವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿ ದೊಡ್ಡ ಅವಘಡವನ್ನು ತಪ್ಪಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮುನ್ನೆಚ್ಚರಿಕೆ ಕ್ರಮವಾಗಿ, ಮಹಿಳಾ ಮತ್ತು ಮಕ್ಕಳ ವಾರ್ಡ್‌ಗಳ ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದರು.

ಆಸ್ಪತ್ರೆಯ ಅಡುಗೆಮನೆ ಪ್ರದೇಶದ ದಾಸ್ತಾನು ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಳಿಗ್ಗೆ 9.20ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 10 ನಿಮಿಷಗಳಲ್ಲಿ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆ ಆಡಳಿತದ ತ್ವರಿತವಾಗಿ ಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಪರಿಸ್ಥಿತಿ ಹತೋಟಿಗೆ ಬಂತು ಎಂದು ಅವರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಆಸ್ಪತ್ರೆಯ ಸಿವಿಲ್ ಸರ್ಜನ್ ಮತ್ತು ಉಸ್ತುವಾರಿ ಡಾ. ರೂಪೇಶ್ ಪದ್ಮಾಕರ್ ಮತ್ತು ನಿವಾಸ ವೈದ್ಯಕೀಯ ಅಧಿಕಾರಿ (ಆರ್‌ಎಂಒ) ಡಾ. ರಾನು ವರ್ಮಾ ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ.

ಎಲೆಕ್ಟ್ರಿಶಯನ್ ಮತ್ತು ಅವರ ಸಹಾಯಕರು ತಡಮಾಡದೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿ ಬೆಂಕಿ ನಂದಿಸುವ ಸಾಧನಗಳನ್ನು ಬಳಸಿದರು ಎಂದು ಡಾ. ಪದ್ಮಾಕರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.