ADVERTISEMENT

ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಭಗತ್‌ಸಿಂಗ್‌ ನೆಲೆಸಿದ್ದಾರೆ: ಪ್ರಧಾನಿ ಮೋದಿ

ಪಿಟಿಐ
Published 28 ಸೆಪ್ಟೆಂಬರ್ 2021, 5:46 IST
Last Updated 28 ಸೆಪ್ಟೆಂಬರ್ 2021, 5:46 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದರು.

‘ಭಗತ್‌ಸಿಂಗ್ ಅವರ ಧೈರ್ಯ, ತ್ಯಾಗದ ಮನೋಭಾವ ದೇಶದ ಅಸಂಖ್ಯಾತ ಜನರಲ್ಲಿ ದೇಶಭಕ್ತಿಯ ಕಿಡಿಯನ್ನು ಹೊತ್ತಿಸಿತ್ತು. ಇಂಥ ಅಪ್ರತಿಮ ಹೋರಾಟಗಾರ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದ್ದಾರೆ. ನಾನು ಅವರಿಗೆ ತಲೆಬಾಗುತ್ತೇನೆ ಮತ್ತು ಅವರ ಉದಾತ್ತ ಆದರ್ಶಗಳನ್ನು ಸ್ಮರಿಸುತ್ತೇನೆ‘ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

1907ರಲ್ಲಿ ಜನಿಸಿದ ಭಗತ್‌ಸಿಂಗ್‌ ಅವರನ್ನು 1931ರಲ್ಲಿ ಬ್ರಿಟಿಷರು ಗಲ್ಲಿಗೇರಿಸಿದಾಗ ಅವರ ವಯಸ್ಸು ಕೇವಲ 23. ಭಗತ್‌ಸಿಂಗ್ ಅವರಲ್ಲಿದ್ದ ತ್ಯಾಗ ಮತ್ತು ಆದರ್ಶಗಳಿಂದಾಗಿ ಅವರೊಬ್ಬ ಜನಪ್ರಿಯ ನಾಯಕರಾಗಿದ್ದರು. ಈ ಆದರ್ಶಗಳು ಅನೇಕರಿಗೆ ಸ್ಫೂರ್ತಿಯಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.