ADVERTISEMENT

ಭರತನಾಟ್ಯ ಕಲಾವಿದೆ ಸರೋಜಾ ವೈದ್ಯನಾಥನ್‌ ನಿಧನ

ಪಿಟಿಐ
Published 21 ಸೆಪ್ಟೆಂಬರ್ 2023, 15:54 IST
Last Updated 21 ಸೆಪ್ಟೆಂಬರ್ 2023, 15:54 IST
ಸರೋಜಾ ವೈದ್ಯನಾಥನ್‌
ಸರೋಜಾ ವೈದ್ಯನಾಥನ್‌   

ನವದೆಹಲಿ: ಭರತನಾಟ್ಯ ಕಲಾವಿದೆ ಸರೋಜಾ ವೈದ್ಯನಾಥನ್‌ (86) ಅವರು ಗುರುವಾರ ಇಲ್ಲಿ ನಿಧನರಾದರು.

‘ಸರೋಜಾ ಅವರು ಕೆಲ ಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು’ ಎಂದು ಅವರ ಸೊಸೆ ಹಾಗೂ ನೃತ್ಯ ಕಲಾವಿದೆ ರಮಾ ವೈದ್ಯನಾಥನ್‌ ತಿಳಿಸಿದ್ದಾರೆ. ಅಂತ್ಯ ಸಂಸ್ಕಾರ ನವದೆಹಲಿಯ ಲೋಧಿ ಸ್ಮಶಾನದಲ್ಲಿ ಶುಕ್ರವಾರ ನಡೆಯಲಿದೆ.

ಸರೋಜಾ ಅವರು 2002ರಲ್ಲಿ ‘ಪದ್ಮಶ್ರೀ’ ಹಾಗೂ 2013ರಲ್ಲಿ ‘ಪದ್ಮಭೂಷಣ’ ಪುರಸ್ಕಾರಕ್ಕೆ ಭಾಜನರಾಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.