ADVERTISEMENT

ತರಂಗಾಂತರ ಹರಾಜು ಮಾ. 1ರಿಂದ ಆರಂಭ

ಪಿಟಿಐ
Published 6 ಜನವರಿ 2021, 13:20 IST
Last Updated 6 ಜನವರಿ 2021, 13:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: 6ನೇ ಸುತ್ತಿನ ತರಂಗಾಂತರ ಹರಾಜು ಪ್ರಕ್ರಿಯೆ ಮಾರ್ಚ್‌ 1ರಿಂದ ಆರಂಭವಾಗಲಿದೆ. ಈ ಕುರಿತು ಬುಧವಾರ ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.

₹ 3.92 ಲಕ್ಷ ಕೋಟಿ ಮೌಲ್ಯದ 2,251.25 ಮೆಗಾಹರ್ಟ್ಸ್‌ ತರಂಗಾಂತರಗಳ ಹರಾಜು ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಡಿ. 17ರಂದು ಒಪ್ಪಿಗೆ ನೀಡಿತ್ತು.

ಹರಾಜು ಪ್ರಕ್ರಿಯೆಗೂ ಮುನ್ನ ನಡೆಯುವ ಸಭೆಯನ್ನು ಜ. 12ರಂದು ನಿಗದಿ ಮಾಡಲಾಗಿದೆ. ಈ ಸಂಬಂಧ ಸ್ಪಷ್ಟೀಕರಣ ಪಡೆಯಲು ಜ. 28 ಕೊನೆಯ ದಿನವಾಗಿದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.

ADVERTISEMENT

ಟೆಲಿಕಾಂ ಕಂಪನಿಗಳು ಫೆಬ್ರುವರಿ 5ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕು. ಬಿಡ್‌ನಲ್ಲಿ ಪಾಲ್ಗೊಳ್ಳುವವರ ಪಟ್ಟಿಯನ್ನು ಫೆಬ್ರುವರಿ 24ರಂದು ಪ್ರಕಟಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.