ADVERTISEMENT

ಭಾರತದಲ್ಲಿ ಅಮೆರಿಕ ರಾಯಭಾರಿಯಾಗಿ ಗಾರ್ಸೆಟ್ಟಿ ನೇಮಕ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 19:46 IST
Last Updated 4 ಜನವರಿ 2023, 19:46 IST
ಎರಿಕ್‌ ಗಾರ್ಸೆಟ್ಟಿ
ಎರಿಕ್‌ ಗಾರ್ಸೆಟ್ಟಿ   

ನವದೆಹಲಿ: ಭಾರತದ ನೂತನ ರಾಯಭಾರಿಯಾಗಿ ಲಾಸ್‌ ಏಂಜಲೀಸ್‌ನ ಮಾಜಿ ಮೇಯರ್‌ ಎರಿಕ್‌ ಗಾರ್ಸೆಟ್ಟಿ ಅವರನ್ನು ಜೋ ಬೈಡನ್‌ ಸರ್ಕಾರ ಮತ್ತೆ ನೇಮಕ ಮಾಡಿದೆ.

ಗಾರ್ಸೆಟ್ಟಿ ಅವರನ್ನು ಭಾರತದ ರಾಯಭಾರಿಯಾಗಿ ನೇಮಕ ಮಾಡಲು ಬೈಡನ್ ಸರ್ಕಾರ 2021ರ ಜುಲೈ 9ರಂದು ತೀರ್ಮಾನಿಸಿತ್ತು. ಆದರೆ, ಇದಕ್ಕೆ ಸೆನೆಟ್‌ನ ಅನುಮೋದನೆ ದೊರೆತಿರಲಿಲ್ಲ.

ಗಾರ್ಸೆಟ್ಟಿ ಮೇಯರ್‌ ಆಗಿದ್ದಾಗ, ಅವರ ಆಪ್ತ ಹಾಗೂ ಉನ್ನತ ಅಧಿಕಾರಿಯಾಗಿದ್ದ ರಿಕ್‌ ಜಾಕೋಬ್ಸ್‌ ಅವರು ತಮ್ಮ ಕಚೇರಿಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಈ ಕುರಿತು ಗಾರ್ಸೆಟ್ಟಿ ಅವರಿಗೆ ತಿಳಿದಿತ್ತು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅವರ ನೇಮಕಕ್ಕೆ ಆಗ ಅನುಮೋದನೆ ದೊರೆತಿರಲಿಲ್ಲ.

ADVERTISEMENT

ಈಗ, ಗಾರ್ಸೆಟ್ಟಿ ಅವರನ್ನು ಬೈಡನ್‌ ಸರ್ಕಾರ ಮತ್ತೆ ನೇಮಕ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

‘ಗಾರ್ಸೆಟ್ಟಿ ಅವರ ನೇಮಕದಿಂದ ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಗೆ ಅನ್ಯಾಯ ಮಾಡಿದಂತಾಗಿದೆ’ ಎಂದು ‘ವಿಷಲ್‌ಬ್ಲೋವರ್ ಏಡ್’ ಎಂಬ ಸಂಘಟನೆಯ ಸಿಇಒ ಲಿಬಿ ಲಿಯು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.