ADVERTISEMENT

AI ಚಿಪ್‌ಗಳ ರಫ್ತಿಗೆ ಹೊಸ ಕಾನೂನು ಪ್ರಸ್ತಾವ: ಜೋ ಬೈಡನ್‌ ಸರ್ಕಾರದಿಂದ ಚಿಂತನೆ

ಉದ್ಯಮದ ಮೇಲೆ ಋಣಾತ್ಮಕ ಪರಿಣಾಮ

ಏಜೆನ್ಸೀಸ್
Published 13 ಜನವರಿ 2025, 14:02 IST
Last Updated 13 ಜನವರಿ 2025, 14:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ದೇಶದ ಭದ್ರತೆಯನ್ನು ಗಮನದಲ್ಲಿರಿಸಿಕೊಂಡು, ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ರೂಪಿಸಲು ಬಳಸುವ ಸುಧಾರಿತ ಕಂಪ್ಯೂಟರ್‌ ಚಿಪ್‌ಗಳ ರಫ್ತಿಗೆ ಹೊಸ ಕಾನೂನು ಜಾರಿಗೆ ತರಲು ಜೋ ಬೈಡನ್‌ ಸರ್ಕಾರ ನಿರ್ಧರಿಸಿದೆ.

‘120 ದೇಶಗಳ ಡೇಟಾ ಸೆಂಟರ್‌ಗಳಲ್ಲಿ ಮಾತ್ರ ಎ.ಐ ಚಿಪ್‌ ಬಳಕೆ ಮಾಡಲು ಹೊಸ ಕಾನೂನು ಅವಕಾಶ ಕಲ್ಪಿಸಲಿದೆ. ಈಗಿರುವ ಚಿಪ್‌ಗಳನ್ನು ವಿಡಿಯೊ ಗೇಮ್‌ಗಳಿಗಷ್ಟೇ ಬಳಸಲು ಮಿತಿ ವಿಧಿಸಲಿದೆ’ ಎಂದು ಚಿಪ್‌ ಉದ್ಯಮದ ಉದ್ಯಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

‘ಎ.ಐ. ತಂತ್ರಜ್ಞಾನ ರೂಪಿಸಲು ಬಳಸುವ ಕಂಪ್ಯೂಟರ್‌ ಚಿಪ್‌ಗಳ ಅಭಿವೃದ್ಧಿಯಲ್ಲಿ ದೇಶದ ಪಾರುಪತ್ಯವನ್ನು ಉಳಿಸಿಕೊಳ್ಳಲು ಈ ನಿರ್ಧಾರ ಅತ್ಯಗತ್ಯವಾಗಿದೆ’ ಎಂದು ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮೊಂಡೊ ತಿಳಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.