ADVERTISEMENT

ಬಿಹಾರ ಸಂಪುಟ ವಿಸ್ತರಣೆ: ಶಹನವಾಜ್‌ ಹುಸೇನ್‌ ಅಚ್ಚರಿಯ ಸೇರ್ಪಡೆ

ಪಿಟಿಐ
Published 9 ಫೆಬ್ರುವರಿ 2021, 15:30 IST
Last Updated 9 ಫೆಬ್ರುವರಿ 2021, 15:30 IST
ಬಿಜೆಪಿ ರಾಷ್ಟ್ರೀಯ ವಕ್ತಾರ ಸೈಯದ್ ಶಹನವಾಜ್ ಹುಸೇನ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಂಪುಟದ ಸಚಿವರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.
ಬಿಜೆಪಿ ರಾಷ್ಟ್ರೀಯ ವಕ್ತಾರ ಸೈಯದ್ ಶಹನವಾಜ್ ಹುಸೇನ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಂಪುಟದ ಸಚಿವರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.   

ಪಟ್ನಾ:ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ಮಂಗಳವಾರ ಸಂಪುಟ ವಿಸ್ತರಣೆ ಮಾಡಿದ್ದು, ಬಿಜೆಪಿ ಮುಖಂಡ ಸೈಯದ್ ಶಹನವಾಜ್ ಹುಸೇನ್ ಸೇರಿದಂತೆ 17 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿಯ ರಾಷ್ಟ್ರೀಯ ವಕ್ತಾರರೂ ಆದ ಹುಸೇನ್‌ ಅವರು ಕಳೆದ ತಿಂಗಳು ಬಿಹಾರದ ವಿಧಾನ ಪರಿಷತ್ತಿಗೆ ಅಚ್ಚರಿಯ ರೀತಿಯಲ್ಲಿ ಆಯ್ಕೆ ಆಗಿದ್ದರು. ಸಚಿವರ ಪೈಕಿ ಮೊದಲಿಗರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಪ್ರಮುಖ ಖಾತೆಯನ್ನೇ ಪಡೆಯುವ ಸೂಚನೆ ಲಭಿಸಿದೆ.

ಬಿಜೆಪಿಯ ಕೋಟಾದಡಿ ಮಂಗಳವಾರ ಒಂಬತ್ತು ಮಂದಿ ಸಂಪುಟ ಸೇರಿದ್ದಾರೆ. ಇದರಿಂದ ಸಂಪುಟದಲ್ಲಿ ಬಿಜೆಪಿ ಬಲ 20ಕ್ಕೆ ಏರಿದೆ. ಜೆಡಿಯು ಕೋಟಾದಲ್ಲಿ ಎಂಟು ಮಂದಿ ಸಂಪುಟ ಸೇರಿದ್ದಾರೆ. ಈ ಮೂಲಕ ಸಂಪುಟದಲ್ಲಿ ಜೆಡಿಯು ಬಲ 12ಕ್ಕೆ ಏರಿದೆ.

ADVERTISEMENT

ಮಾನದಂಡಗಳ ಪ್ರಕಾರ, ಮುಖ್ಯಮಂತ್ರಿ ಸೇರಿ 36 ಸದಸ್ಯರು ಸಂಪುಟದಲ್ಲಿ ಇರಬಹುದು. ಕಳೆದ ನವೆಂಬರ್‌ನಲ್ಲಿ ಸಂಪುಟ ರಚನೆಯಾದ ವೇಳೆ, ಮಿತ್ರ ಪಕ್ಷಗಳಾದ ವಿಐಪಿ ಮತ್ತು ಎಚ್‌ಎಎಂ ಪಕ್ಷಗಳ ತಲಾ ಒಬ್ಬರು ಸದಸ್ಯರನ್ನು ಸೇರಿಸಿಕೊಳ್ಳಲಾಗಿತ್ತು. ಮಂಗಳವಾರ ಸಂಪುಟ ವಿಸ್ತರಣೆಯಿಂದ ಸಂಪುಟದ ಬಲ 34ಕ್ಕೆ ಏರಿದಂತಾಗಿದೆ.

ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಫಗು ಚೌಹಾಣ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.