ADVERTISEMENT

‘ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’: ಎಫ್‌ಐಆರ್‌ಗೆ ಆದೇಶ

ಪಿಟಿಐ
Published 8 ಜನವರಿ 2019, 19:39 IST
Last Updated 8 ಜನವರಿ 2019, 19:39 IST
ಚಿತ್ರದಲ್ಲಿ ಅನುಪಮ್ ಖೇರ್
ಚಿತ್ರದಲ್ಲಿ ಅನುಪಮ್ ಖೇರ್   

ಮುಜಫ್ಫರ್‌ಪುರ್‌, ಬಿಹಾರ:‘ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಲನಚಿತ್ರದಲ್ಲಿ ನಟಿಸಿದ ಅನುಪಮ್‌ ಖೇರ್‌, ಅಕ್ಷಯ್‌ ಖನ್ನಾ ಮತ್ತು ಈ ಚಿತ್ರಕ್ಕೆ ಸಂಬಂಧಪಟ್ಟ ಇತರೆ 15 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ಇಲ್ಲಿನ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

‘ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿನ ಘಟನಾವಳಿ ಕುರಿತು ಈ ಸಿನಿಮಾ ನಿರ್ಮಾಣವಾಗಿದೆ. ಈ ಸಿನಿಮಾದಲ್ಲಿ ಸಿಂಗ್‌ ಹಾಗೂ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳಗೌರವಕ್ಕೆ ಧಕ್ಕೆ ತರಲಾಗಿದೆ. ಆದ್ದರಿಂದ ಈ ಚಿತ್ರಕ್ಕೆ ಸಂಬಂಧಿಸಿದವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಬೇಕು’ ಎಂದು ಕೋರಿ ವಕೀಲ ಸುಧೀರ್‌ ಕುಮಾರ್‌ ಓಝಾ ಎಂಬುವರು ನ್ಯಾಯಾಲಯದಲ್ಲಿ ಜನವರಿ 2 ರಂದು ದೂರು ಸಲ್ಲಿಸಿದ್ದರು.

ಈ ದೂರಿನ ವಿಚಾರಣೆ ನಡೆಸಿದ ಉಪ ವಿಭಾಗೀಯ ನ್ಯಾಯಾಧೀಶ (ಪೂರ್ವ) ಗೌರವ್‌ ಕಮಲ್‌ ಅವರು ಎಫ್‌ಐಆರ್‌ ದಾಖಲಿಸುವಂತೆ ಕಾಂತಿ ಪೊಲೀಸ್‌ ಠಾಣೆಗೆ ಆದೇಶಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.