ADVERTISEMENT

ಸೋತ ನಂತರ ಎಂಜಲು ನೆಕ್ಕುವಂತೆ ಹೇಳಿದ್ದ ಅಭ್ಯರ್ಥಿ ಸೆರೆ

ಪಿಟಿಐ
Published 13 ಡಿಸೆಂಬರ್ 2021, 12:23 IST
Last Updated 13 ಡಿಸೆಂಬರ್ 2021, 12:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಔರಂಗಾಬಾದ್: ಪಂಚಾಯಿತಿ ಚುನಾವಣೆಯ ಸೋಲಿನ ನಂತರ ಪರಿಶಿಷ್ಟರ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಬಿಹಾರದಲ್ಲಿ ಅಭ್ಯರ್ಥಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಬಿಹಾರ ವ್ಯಾಪ್ತಿಯ ದುಮ್ರಿ ಪಂಚಾಯತ್‌ನ ಮುಖ್ಯಸ್ಥನ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದ ಬಲ್ವಂತ್‌ ಸಿಂಗ್‌ ಬಂಧಿತ. ‘ನೆಲಕ್ಕೆ ಎಂಜಲು ಉಗುಳಿ, ಅದನ್ನು ನೆಕ್ಕುವಂತೆ ಕೆಲವರಿಗೆ ಆರೋಪಿಯು ಒತ್ತಡ ಹೇರಿದ್ದ ಹಾಗೂ ಜಾತಿಯನ್ನು ಉಲ್ಲೇಖಿಸಿ ನಿಂದನೆ ಮಾಡಿದ್ದ ವಿಡಿಯೊ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದನ್ನು ಆಧರಿಸಿ ಬಂಧಿಸಲಾಗಿದೆ ಎಂದು ಔರಂಗಾಬಾದ್‌ ಉಪ ವಿಭಾಗದ ಹೆಚ್ಚುವರಿ ಎಸ್‌ಪಿ ಶಿವಕುಮಾರ್ ರಾವ್‌ ಅವರು ತಿಳಿಸಿದರು.

ನಾನು ಕೊಟ್ಟಿದ್ದ ಮದ್ಯ ಕುಡಿದಿದ್ದೀರಿ, ನನಗೆ ಮತ ನೀಡಿಲ್ಲ ಎಂದು ಆರೋಪಿ ಹೇಳಿರುವುದು ವಿಡಿಯೊದಲ್ಲಿದೆ. ಇದರ ಖಚಿತತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಬಿಹಾರದಲ್ಲಿ ಮದ್ಯಮಾರಾಟಕ್ಕೆ ನಿಷೇಧವಿದೆ.

ADVERTISEMENT

ಅನುಚಿತ ವರ್ತನೆ ತೋರಿದ್ದಕ್ಕಾಗಿ ನಾನು ಗ್ರಾಮಸ್ಥರಿಗೆ ದಂಡನೆ ನೀಡಿದ್ದೇನೆ. ಇದರಿಂದ ಕೋಪಗೊಂಡು ನನ್ನ ವಿರುದ್ಧ ದೂರು ನೀಡಿದ್ದಾರೆ ಎಂದು ಆರೋಪಿಯು ಪೊಲೀಸರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.