ADVERTISEMENT

ಬಿಹಾರ ಚುನಾವಣೆ: ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಸಿಪಿಐ(ಎಂಎಲ್‌) ಲಿಬರೇಶನ್

ಪಿಟಿಐ
Published 18 ಅಕ್ಟೋಬರ್ 2025, 7:19 IST
Last Updated 18 ಅಕ್ಟೋಬರ್ 2025, 7:19 IST
<div class="paragraphs"><p>ಸಿಪಿಐ(ಎಂಎಲ್‌) ಲಿಬರೇಶನ್</p></div>

ಸಿಪಿಐ(ಎಂಎಲ್‌) ಲಿಬರೇಶನ್

   

ಚಿತ್ರಕೃಪೆ: ವಿಕಿಪೀಡಿಯ

ಪಟ್ನಾ(ಬಿಹಾರ): ಬಿಹಾರ ವಿಧಾನಸಭಾ ಚುನಾವಣೆಗೆ ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷ ಸಿಪಿಐ(ಎಂಎಲ್‌) ಲಿಬರೇಶನ್, 20 ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ತನ್ನ ಎಲ್ಲಾ 12 ಹಾಲಿ ಶಾಸಕರನ್ನು ಮತ್ತೆ ಕಣಕ್ಕಿಳಿಸಿದೆ.

ADVERTISEMENT

2020ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಕ್ಷೇತ್ರಗಳ ಬಗ್ಗೆ ಹೆಚ್ಚು ಗಮನಹರಿಸಿರುವ ಪಕ್ಷವು, ಆ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಟಿಕೆಟ್‌ ನೀಡಿದೆ. ಕಳೆದ ಚುನಾವಣೆಯಲ್ಲಿ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, 12 ಕ್ಷೇತ್ರಗಳನ್ನು ಗೆದ್ದಿತ್ತು.

ಶಾಸಕರಾದ ಅಮರ್‌ಜೀತ್ ಕುಶ್ವಾಹ, ಸತ್ಯದೇವ್ ರಾಮ್, ಗೋಪಾಲ್ ರವಿ ದಾಸ್, ಸಂದೀಪ್ ಸೌರವ್, ಶಿವಪ್ರಕಾಶ್ ರಣಜ್, ಅಜೀತ್ ಕುಮಾರ್ ಸಿಂಗ್, ಬೀರೇಂದ್ರ ಪ್ರಸಾದ್ ಮತ್ತು ಮಹಬೂಬ್ ಆಲಂಗೆ ಮತ್ತೆ ಟಿಕೆಟ್‌ ನೀಡಿದೆ.

‘ಈ ಬಾರಿ 24 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಾವು ಬಯಸಿದ್ದೆವು. ಅಂತಿಮವಾಗಿ ನಮಗೆ 20 ವಿಧಾನಸಭಾ ಕ್ಷೇತ್ರಗಳು ಸಿಕ್ಕಿವೆ. ‘ಮಹಾಘಟಬಂಧನ್‌’ ಭಾರಿ ಬಹುಮತದೊಂದಿಗೆ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಜನರು ಎನ್‌ಡಿಎ ಸರ್ಕಾರದಿಂದ ಬೇಸತ್ತಿದ್ದಾರೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ದೀಪಂಕರ ಭಟ್ಟಾಚಾರ್ಯ ಹೇಳಿದ್ದಾರೆ.

243 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.