ADVERTISEMENT

ಬಿಹಾರ ರಾಜಕಾರಣದಲ್ಲಿ ಬದಲಾವಣೆ ಅನಿವಾರ್ಯ: ಲಾಲೂ ಪ್ರಸಾದ್‌

ಪಿಟಿಐ
Published 6 ನವೆಂಬರ್ 2025, 10:07 IST
Last Updated 6 ನವೆಂಬರ್ 2025, 10:07 IST
   

ಪಟ್ನಾ: ಬಿಹಾರದಲ್ಲಿ ಸರ್ಕಾರ ಬದಲಾಗಬೇಕಿರುವುದು ಅನಿವಾರ್ಯ ಎಂದು ಹೇಳಿರುವ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌, ‘ಹೆಂಚಿನ ಮೇಲೆ ರೊಟ್ಟಿಯನ್ನು ತಿರುಗಿಸದೇ ಹಾಗೆ ಬಿಟ್ಟರೆ ಅದು ಸುಟ್ಟು ಹೋಗುತ್ತದೆ’ ಎಂದಿದ್ದಾರೆ.

ಬಿಹಾರದಲ್ಲಿ ಇಂದು(ನ.6) ಮೊದಲ ಹಂತದ ಮತದಾನ ನಡೆಯುತ್ತಿದೆ. ಪತ್ನಿ ರಾಬ್ರಿ ದೇವಿ, ಪುತ್ರ, ಇಂಡಿಯಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರೊಡನೆ ಲಾಲೂ ಪ್ರಸಾದ್ ಮತಚಲಾಯಿಸಿದ್ದಾರೆ.

ಮತದಾನದ ನಂತರ ಕುಟುಂಬದೊಂದಿಗೆ ತೆಗೆಸಿಕೊಂಡ ಫೋಟೊವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಸರ್ಕಾರ ಬದಲಾವಣೆ ಇಂದಿನ ಅಗತ್ಯ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

‘ಬಿಹಾರದಲ್ಲಿ ಎನ್‌ಡಿಎ ಸುದೀರ್ಘ 20 ವರ್ಷಗಳ ಕಾಲ ಆಡಳಿತ ನಡೆಸಿದೆ. ಇದೀಗ ಹೊಸ ಬಿಹಾರ ನಿರ್ಮಿಸಲು ತೇಜಸ್ವಿ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯುವ ಅಗತ್ಯವಿದೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.