ADVERTISEMENT

ಬಿಹಾರ ಚುನಾವಣೆ: ಪುಟಿದೆದ್ದ ಎನ್‌ಡಿಎ, ಹಿಂದುಳಿದ ಮಹಾಘಟಬಂಧನ್

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 5:27 IST
Last Updated 10 ನವೆಂಬರ್ 2020, 5:27 IST
ನಿತೀಶ್‌ ಕುಮಾರ್
ನಿತೀಶ್‌ ಕುಮಾರ್   

ಪಟ್ನಾ: ಬಿಹಾರ ಮತ ಎಣಿಕೆ ಚುರುಕಾಗುತ್ತಿದ್ದಂತೆ ಎನ್‌ಡಿಎ ಮುನ್ನಡೆ ಸಾಧಿಸುವ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ.

10.45ರ ಅವಧಿಯಲ್ಲಿ ಒಟ್ಟು 125 ಕ್ಷೇತ್ರಗಳಲ್ಲಿ ಎನ್‌ಡಿಎ, 101 ಕ್ಷೇತ್ರಗಳಲ್ಲಿ ಮಹಾಘಟಬಂಧನ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರು.

ಮುಂಜಾನೆ ಅಂಚೆ ಮತ ಎಣಿಕೆ ಆರಂಭವಾದ ಕ್ಷಣದಿಂದ ಮುನ್ನಡೆ ಕಾಯ್ದುಕೊಂಡಿದ್ದ ಮಹಾಘಟಬಂಧನ್ ಇದೀಗ ಹಿಂದಕ್ಕೆ ಸರಿದಿದೆ. ಬಿಹಾರದಲ್ಲಿ ಅಧಿಕಾರ ಹಿಡಿಯಲು ಬೇಕಿರುವ ಮ್ಯಾಜಿಕ್ ನಂಬರ್‌ 122ರ ಗಡಿಯನ್ನು ಎನ್‌ಡಿಎ ದಾಟಿದೆ.

ADVERTISEMENT

ಮತ ಎಣಿಕೆ ಪೂರ್ಣಗೊಳ್ಳಲು ಇನ್ನೂ ಕೆಲ ಸಮಯ ಬೇಕಿದ್ದು, ಅಂತಿಮ ಫಲಿತಾಂಶ ಏನು ಬೇಕಾದರೂ ಆಗಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.