ADVERTISEMENT

Bihar Elections: ನೀತಿ ಸಂಹಿತೆ ಉಲ್ಲಂಘನೆ; ಲಾಲು ಪ್ರಸಾದ್ ಮಗನ ವಿರುದ್ಧ ಪ್ರಕರಣ

ಪಿಟಿಐ
Published 20 ಅಕ್ಟೋಬರ್ 2025, 2:04 IST
Last Updated 20 ಅಕ್ಟೋಬರ್ 2025, 2:04 IST
<div class="paragraphs"><p>ತೇಜ್‌ ಪ್ರತಾಪ್ ಯಾದವ್</p></div>

ತೇಜ್‌ ಪ್ರತಾಪ್ ಯಾದವ್

   

ಹಾಜಿಪುರ್‌: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಹಿರಿಯ ಮಗ ಹಾಗೂ ಜನಶಕ್ತಿ ಜನತಾ ದಳ ನಾಯಕ ತೇಜ್‌ ಪ್ರತಾಪ್‌ ಯಾದವ್‌ ವಿರುದ್ಧ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆ ಸಂಬಂಧ ಪ್ರಕರಣ ದಾಖಲಾಗಿದೆ. ವೈಶಾಲಿ ಜಿಲ್ಲೆಯ ಮಥುವಾ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ವೇಳೆ ಅವರು ನಿಮಯ ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸರ ಮಾಹಿತಿ ಪ್ರಕಾರ, ಪ್ರತಾಪ್‌ ಅವರು ಅಕ್ಟೋಬರ್‌ 16ರಂದು ನಾಮಪತ್ರ ಸಲ್ಲಿಸುವ ತೆರಳುವ ವೇಳೆ ಪೊಲೀಸ್‌ ವಾಹನ ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ, ಮಹುವಾ ಸರ್ಕಲ್‌ ಇನ್‌ಸ್ಪೆಕ್ಟರ್‌ ಅವರು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಠಾಣೆಗೆ ಸೂಚಿಸಿದ್ದಾರೆ.

ADVERTISEMENT

'ಕೂಲಂಕಷವಾಗಿ ಪರಿಶೀಲಿಸಿದ ವೇಳೆ ಖಾಸಗಿ ವಾಹನದ ಮೇಲೆ ಪೊಲೀಸ್‌ ಲಾಂಛನ ಮತ್ತು ಲೈಟ್‌ ಅಳವಡಿಸಿರುವುದು ಕಂಡು ಬಂದಿದೆ. ಹೀಗಾಗಿ, ನೀತಿಸಂಹಿತೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಪೊಲೀಸರ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಲಾಲು ಅವರು ಪ್ರತಾಪ್‌ ಅವರನ್ನು ಮೇ 25ರಂದು ಆರ್‌ಜೆಡಿಯಿಂದ ಆರು ವರ್ಷಗಳ ವರೆಗೆ ಹೊರಹಾಕಿದ್ದಾರೆ. ಅದಾದ ನಂತರ ಪ್ರತಾಪ್‌ ಹೊಸ ಪಕ್ಷ ಸ್ಥಾಪಿಸಿದ್ದಾರೆ.

ಎರಡು ಹಂತದ ಮತದಾನ
243 ಕ್ಷೇತ್ರಗಳಿರುವ ಬಿಹಾರದಲ್ಲಿ ಎರಡು ಹಂತಗಳಲ್ಲಿ ಮತದಾನಕ್ಕೆ ದಿನಾಂಕ ನಿಗದಿಯಾಗಿದೆ. ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ನವೆಂಬರ್‌ 6ರಂದು, ಎರಡನೇ ಹಂತದಲ್ಲಿ 122 ಕ್ಷೇತ್ರಗಳಿಗೆ ನವೆಂಬರ್‌ 11ರಂದು ಮತದಾನವಾಗಲಿದೆ. ನವೆಂಬರ್‌ 14ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.