ADVERTISEMENT

Bihar Polls | ಮದುವೆ ಯಾವಾಗ?: ರಾಹುಲ್ ಗಾಂಧಿಗೆ ಬಾಲಕನ ಪ್ರಶ್ನೆ

ಪಿಟಿಐ
Published 6 ನವೆಂಬರ್ 2025, 15:34 IST
Last Updated 6 ನವೆಂಬರ್ 2025, 15:34 IST
   

ಅರರಿಯಾ: ಇಲ್ಲಿ ಗುರುವಾರ ನಡೆದ ಚುನಾವಣಾ ರ್‍ಯಾಲಿಯಲ್ಲಿ ರಾಹುಲ್‌ ಗಾಂಧಿ ಅವರಿಗೆ ಹಸ್ತಲಾಘವ ನೀಡಿದ ಬಾಲಕನೊಬ್ಬ, ‘ನಿಮ್ಮ ಮದುವೆ ಯಾವಾಗ’ ಎಂದು ಪ್ರಶ್ನಿಸಿದ್ದಾನೆ.

ಬಾಲಕ ಮತ್ತು ರಾಹುಲ್‌ ನಡುವಿನ ಪುಟ್ಟ ಸಂಭಾಷಣೆಯ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ವಿಡಿಯೊದಲ್ಲಿ ರಾಹುಲ್ ಬಳಿ ಬಾಲಕ ಏನು ಮಾತನಾಡಿದ್ದಾನೆ ಎಂಬುವುದು ಅಸ್ಪಷ್ಟವಾಗಿದೆ.

ನಂತರ ಪಿಟಿಐ ಸುದ್ದಿಸಂಸ್ಥೆ ಜೊತೆ ಬಾಲಕ ಮಾತನಾಡಿದ್ದು, ‘ರಾಹುಲ್‌ ಗಾಂಧಿಗೆ ಮದುವೆ ಯಾವಾಗ ಆಗುತ್ತೀರಾ? ಎಂದು ಕೇಳಿದ್ದೇನೆ. ನನ್ನ ಕೆಲಸ ಮುಗಿದ ನಂತರ ಮದುವೆಯಾಗುತ್ತೇನೆ ಎಂದು ಅವರು ನನಗೆ ತಿಳಿಸಿದ್ದಾರೆ’ ಎಂದು ಹೇಳಿದ್ದಾನೆ.

ADVERTISEMENT

243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಮೊದಲ ಹಂತದ ಮತದಾನ ಇಂದು ನಡೆದಿದೆ. ಎರಡನೇ ಹಂತದ ಮತದಾನ ನ.11ಕ್ಕೆ ನಡೆಯಲಿದೆ. ನ.14ಕ್ಕೆ ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.