ADVERTISEMENT

ಉದ್ಯೋಗಕ್ಕಾಗಿ ಭೂಮಿ ಹಗರಣ: ಇ.ಡಿ ಮುಂದೆ ಲಾಲು ಹಾಜರು

ಪಿಟಿಐ
Published 19 ಮಾರ್ಚ್ 2025, 14:27 IST
Last Updated 19 ಮಾರ್ಚ್ 2025, 14:27 IST
ಲಾಲು ಪ್ರಸಾದ್‌
ಲಾಲು ಪ್ರಸಾದ್‌   

ಪಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ಬುಧವಾರ ವಿಚಾರಣೆಗೆ ಹಾಜರಾದರು. ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಲಾಲು ಪ್ರಸಾದ್‌ ವಿರುದ್ಧ ಮೇಲೆ ಇ.ಡಿ ತನಿಖೆ ನಡೆಸುತ್ತಿದೆ.

ಲಾಲು ಪ್ರಸಾದ್‌ ಅವರನ್ನು ಇ.ಡಿ ಅಧಿಕಾರಿಗಳು ನಾಲ್ಕು ತಾಸುಗಳ ವರೆಗೆ ಪ್ರಶ್ನೋತ್ತರ ನಡೆಸಿದರು. ಇ.ಡಿ ಕಚೇರಿಯ ಮುಂದೆ ಆರ್‌ಜೆಡಿ ಪಕ್ಷದ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಲಾಲು ಅವರ ಪರವಾಗಿ ಜಯಘೋಷಗಳನ್ನು ಕೂಗಿದರು.

ಮಗಳು, ಸಂಸದೆ ಮಿಸಾ ಭಾರತಿ ಅವರೊಂದಿಗೆ ಲಾಲು ಬಂದಿದ್ದರು. ಪ್ರಶ್ನೋತ್ತರ ಎದುರಿಸಿದ ಬಳಿಕ ಲಾಲು ಅವರು ಮಾಧ್ಯಮಗಳೊಂದಿಗೆ ಮಾತನಾಡಲಿಲ್ಲ. ಪತ್ನಿ ರಾಬ್ಡಿ ದೇವಿ ಹಾಗೂ ಪುತ್ರ ತೇಜ್‌ ಪ್ರತಾಪ್‌ ಅವರು ಮಂಗಳವಾರ ಇ.ಡಿ ಮುಂದೆ ಹಾಜರಾಗಿದ್ದರು.

ADVERTISEMENT
ದೆಹಲಿ ಚುನಾವಣೆ ಮುಗಿದ ಬಳಿಕವೇ ನಾನು ಹೇಳಿದ್ದೆ ಈಗ ಎಲ್ಲ ತನಿಖಾ ಸಂಸ್ಥೆಗಳು ಬಿಹಾರಕ್ಕೆ ದೌಡಾಯಿಸುತ್ತವೆ ಎಂಬುದಾಗಿ
ತೇಜಸ್ವಿ ಯಾದವ್‌ ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.