ADVERTISEMENT

ಬಿಹಾರ: ₹5,900 ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ

ಪಿಟಿಐ
Published 20 ಜೂನ್ 2025, 10:28 IST
Last Updated 20 ಜೂನ್ 2025, 10:28 IST
<div class="paragraphs"><p>ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ</p></div>

ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ

   

– ಪಿಟಿಐ ಚಿತ್ರ

ಸಿವಾನ್: ಬಿಹಾರದ ಸಿವಾನ್ ಜಿಲ್ಲೆಯಲ್ಲಿ ₹5,900 ಕೋಟಿಗೂ ಅಧಿಕ ಮೌಲ್ಯದ 28 ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿದ್ದಾರೆ.

ADVERTISEMENT

₹ 400 ಕೋಟಿಗೂ ಅಧಿಕ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ವೈಶಾಲಿ-ದಿಯೋರಿಯಾ ರೈಲು ಮಾರ್ಗ ಯೋಜನೆಯನ್ನು ಉದ್ಘಾಟಿಸಿ, ಈ ಮಾರ್ಗದಲ್ಲಿ ಹೊಸ ರೈಲು ಸೇವೆಗೆ ಚಾಲನೆ ನೀಡಿದ್ದಾರೆ.

ಮುಜಫರ್‌ಪುರ ಮತ್ತು ಬೆಟ್ಟಿಯಾ ಮೂಲಕ ಪಾಟಲಿಪುತ್ರ (ಪಾಟ್ನಾ) ಮತ್ತು ಗೋರಖ್‌ಪುರ (ಉತ್ತರ ಪ್ರದೇಶ) ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೂ ಮೋದಿ ಚಾಲನೆ ನೀಡಿದ್ದಾರೆ.

'ಮೇಕ್ ಇನ್ ಇಂಡಿಯಾ - ಮೇಕ್ ಫಾರ್ ದಿ ವರ್ಲ್ಡ್' ಉಪಕ್ರಮದಡಿ ಗಿನಿಯಾ ದೇಶಕ್ಕೆ ರಫ್ತು ಮಾಡಲು ಮಾರ್ಹೌರಾ ಸ್ಥಾವರದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಲೋಕೋಮೋಟಿವ್ ಕೂಡ ಇದೇ ವೇಳೆ ಲೋಕಾರ್ಪಣೆಗೊಂಡಿತು.

ನಮಾಮಿ ಗಂಗೆ ಯೋಜನೆಯಡಿಯಲ್ಲಿ ₹1,800 ಕೋಟಿಗೂ ಹೆಚ್ಚು ಮೌಲ್ಯದ ಆರು ಒಳಚರಂಡಿ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು. ಬಿಹಾರದಾದ್ಯಂತ ₹3 ಸಾವಿರ ಕೋಟಿ ವೆಚ್ಚದಲ್ಲಿ ಹೆಚ್ಚುವರಿ ನೀರು ಸರಬರಾಜು, ನೈರ್ಮಲ್ಯ ಮತ್ತು ಎಸ್‌ಟಿಪಿ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಮುಜಫರ್‌ಪುರ, ಮೋತಿಹಾರಿ, ಬೆಟ್ಟಿಯಾ ಮತ್ತು ಸಿವಾನ್ ಸೇರಿದಂತೆ ರಾಜ್ಯದ 15 ಗ್ರಿಡ್ ಸಬ್‌ಸ್ಟೇಷನ್‌ಗಳಲ್ಲಿ 500 ಮೆಗಾವ್ಯಾಟ್ ಬ್ಯಾಟರಿ ಇಂಧನ ಸಂಗ್ರಹ ವ್ಯವಸ್ಥೆಗೆ ಇದೇ ವೇಳೆ ಶಂಕುಸ್ಥಾಪನೆ ನೆರವೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.