ADVERTISEMENT

SIR ಕುರಿತು ಚರ್ಚೆಗೆ ವಿರೋಧ ಪಕ್ಷಗಳ ಪಟ್ಟು; ರಾಜ್ಯಸಭಾ ಕಲಾಪ ನಾಳೆಗೆ ಮುಂದೂಡಿಕೆ

ಪಿಟಿಐ
Published 28 ಜುಲೈ 2025, 9:28 IST
Last Updated 28 ಜುಲೈ 2025, 9:28 IST
   

ನವದೆಹಲಿ: ಬಿಹಾರದಲ್ಲಿ ನಡೆಸಲಾದ ವಿಶೇಷ ತ್ವರಿತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ವಿರೋಧಿಸಿ ವಿರೋಧ ಪಕ್ಷಗಳು ಸದನದಲ್ಲಿ ಪ್ರತಿಭಟಿಸಿದ ಕಾರಣ ರಾಜ್ಯಸಭಾ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

ಸೋಮವಾರ ಬೆಳಿಗ್ಗೆ ಎರಡು ಬಾರಿ ಕಲಾಪವನ್ನು ಮುಂದೂಡಲಾಗಿತ್ತು. ಕಲಾಪ ಆರಂಭವಾದ ಕೆಲವೇ ಸಮಯದಲ್ಲಿ 12 ಗಂಟೆಗೆ ಕಲಾಪವನ್ನು ಮುಂದೂಡಲಾಗಿತ್ತು. ನಂತರವೂ ವಿರೋಧ ಪಕ್ಷಗಳ ಸಂಸದರು ಬಿಹಾರದ ಎಸ್‌ಐಆರ್‌ ಕುರಿತು ಚರ್ಚಿಸಲು ಒತ್ತಾಯಿಸಿದಾಗ ಮಧ್ಯಾಹ್ನ 2 ಗಂಟೆಯವರೆಗೂ ಕಲಾಪವನ್ನು ಮತ್ತೆ ಮುಂದೂಡಲಾಗಿತ್ತು.

ಮಧ್ಯಾಹ್ನ 2 ಗಂಟೆಯ ನಂತರ ಕಲಾಪದಲ್ಲಿ, ಸಮುದ್ರದ ಮೂಲಕ ಸರಕುಗಳ ಸಾಗಣೆ – 2025 ವಿಧೇಯಕದ ಕುರಿತು ಚರ್ಚಿಸಲು ರಾಜ್ಯಸಭಾ ಸ್ಪೀಕರ್ ಹರಿವಂಶ್ ನಾರಾಯಣ ಸಿಂಗ್ ಅವರು ಮನವಿ ಮಾಡಿದರು. ಆ ವೇಳೆಯೂ ವಿರೋಧ ಪಕ್ಷಗಳ ಸಂಸದರು ಎಸ್‌ಐಆರ್‌ ಕುರಿತು ಚರ್ಚಿಸಲು ಒತ್ತಾಯಿಸಿ, ಸದನದ ಬಾವಿಗೆ ಇಳಿದು ಪ್ರತಿಭಟಿಸಿದ ಕಾರಣ ರಾಜ್ಯಸಭಾ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

ADVERTISEMENT

ಲೋಕಸಭೆಯಲ್ಲಿ ಕೂಡ ವಿರೋಧ ಪಕ್ಷಗಳು ಎಸ್‌ಐಆರ್‌ ಕುರಿತು ಚರ್ಚಿಸಲು ಒತ್ತಾಯಿಸಿ, ಪ್ರತಿಭಟಿಸಿದ ಕಾರಣ ಕಲಾಪವನ್ನು ಮಧ್ಯಾಹ್ನದವರೆಗೂ ಮಂದೂಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.