ADVERTISEMENT

ಎಸ್‌ಐಆರ್ | ಬಿಹಾರದ ಮತದಾರರಿಗೆ ಹೊಸ ಮತದಾರರ ಗುರುತಿನ ಚೀಟಿ ನೀಡಲು ‌EC ಚಿಂತನೆ

ಪಿಟಿಐ
Published 31 ಆಗಸ್ಟ್ 2025, 11:16 IST
Last Updated 31 ಆಗಸ್ಟ್ 2025, 11:16 IST
<div class="paragraphs"><p>ಮತದಾರರ ಗುರುತಿನ ಚೀಟಿ</p></div>

ಮತದಾರರ ಗುರುತಿನ ಚೀಟಿ

   

(ಎಐ ಚಿತ್ರ)

ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪೂರ್ಣಗೊಂಡ ಬಳಿಕ ರಾಜ್ಯದ ಎಲ್ಲಾ ಮತದಾರರಿಗೆ ಹೊಸ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲು ಚುನಾವಣಾ ಆಯೋಗ (ಇ.ಸಿ) ಯೋಚಿಸಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

ADVERTISEMENT

ಆದರೆ, ಹೊಸ ಮತದಾರರ ಗುರುತಿನ ಚೀಟಿಗಳನ್ನು ಯಾವಾಗ ವಿತರಿಸಲಾಗುವುದು, ಪ್ರಕ್ರಿಯೆಯನ್ನು ಹೇಗೆ ಪ್ರಾರಂಭಿಸಲಾಗುವುದು ಎಂಬ ಮಾಹಿತಿಯನ್ನು ಚುನಾವಣಾ ಆಯೋಗ ಅಂತಿಮಗೊಳಿಸಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಮತದಾರರಿಗೆ ಇತ್ತೀಚಿನ ಭಾವಚಿತ್ರದೊಂದಿಗೆ ದಾಖಲೆಗಳನ್ನು ಭರ್ತಿ ಮಾಡಲು ತಿಳಿಸಲಾಗಿತ್ತು. ಇದರಿಂದ ದಾಖಲೆಗಳನ್ನು ನವೀಕರಿಸುವ ಉದ್ದೇಶ ಹೊಂದಿತ್ತು . ಆಗಸ್ಟ್ 1ರಂದು ಪ್ರಕಟವಾದ ಬಿಹಾರದ ಕರಡು ಮತದಾರರ ಪಟ್ಟಿಯ ಪ್ರಕಾರ, ರಾಜ್ಯದಲ್ಲಿ 7.24 ಕೋಟಿ ಮತದಾರರಿದ್ದಾರೆ. ಕರಡು ಪಟ್ಟಿಯಲ್ಲಿ ತಮ್ಮ ಹೆಸರುಗಳು ಕಾಣೆಯಾಗಿದ್ದರಿಂದ ಸುಮಾರು 30,000 ಜನರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಎಂದು ಅರ್ಜಿ ಸಲ್ಲಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮತದಾನದ ದಿನದಂದು ಮತಗಟ್ಟೆಗಳಲ್ಲಿ ಜನದಟ್ಟಣೆ ಕಡಿಮೆಯಾಗುವ ನಿಟ್ಟಿನಲ್ಲಿ ಪ್ರತಿ ಮತಗಟ್ಟೆಗೆ ಮತದಾರರ ಸಂಖ್ಯೆಯನ್ನು 1500 ರಿಂದ ಗರಿಷ್ಠ 1200ಕ್ಕೆ ಇಳಿಸಿದ ಮೊದಲ ರಾಜ್ಯ ಬಿಹಾರವಾಗಿದೆ. ಮತದಾನ ಕೇಂದ್ರಗಳ ಸಂಖ್ಯೆ 77,000 ದಿಂದ 90,000 ಕ್ಕೆ ಏರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್ 30ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ನವೆಂಬರ್‌ನಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.