ADVERTISEMENT

ಬಿಕಾನೇರ್‌ನಲ್ಲಿ ಮನೆ ಮನೆಗೆ ತೆರಳಿ ಕೋವಿಡ್‌ ಲಸಿಕೆ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 3:15 IST
Last Updated 13 ಜೂನ್ 2021, 3:15 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬಿಕಾನೇರ್‌ (ರಾಜಸ್ಥಾನ): ರಾಜಸ್ಥಾನದ ಬಿಕಾನೇರ್‌ನಲ್ಲಿ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಆ ಮೂಲಕಬಿಕಾನೇರ್‌, ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಅಭಿಯಾನ ನಡೆಸುತ್ತಿರುವ ದೇಶದ ಮೊದಲ ಪಟ್ಟಣವಾಗಿದೆ.

ಕೋವಿಡ್‌ ಎರಡನೇ ಅಲೆ ಅಪಾಯಕಾರಿಯಾಗಿರುವುದರಿಂದ ತ್ವರಿತವಾಗಿ ಜನರಿಗೆ ಲಸಿಕೆ ನೀಡಬೇಕಾಗಿದೆ. ಈ ಹಿನ್ನಲೆಯಲ್ಲಿ ಮನೆ ಮನೆಗೆ ತೆರಳಿ ಲಸಿಕೆ ಹಾಕಿವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ವೈವ್‌ ಹಿಂದೂಸ್ಥಾನ್‌ ಪತ್ರಿಕೆ ವರದಿ ಮಾಡಿದೆ.

ವಾಟ್ಸ್ಆ್ಯಪ್‌ ಮೂಲಕ ನೋಂದಣಿ ಮಾಡಿಕೊಂಡ45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಅವರು ಇರುವ ಸ್ಥಳಕ್ಕೆ ತೆರಳಿಕೋವಿಡ್ ಲಸಿಕೆ ನೀಡಲಾಗುತ್ತಿದೆ. ಈ ಅಭಿಯಾನಕ್ಕೆ ಎರಡು ಆ್ಯಂಬುಲೆನ್ಸ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಹಿರಿಯ ವೈದ್ಯರೊಬ್ಬರು ಹಾಗೂ ಪ್ಯಾರಾಮೆಡಿಕಲ್‌ ಸಿಬ್ಬಂದಿ ಇರುವ ತಂಡ ಲಸಿಕೆ ನೀಡುತ್ತಿದೆ ಎಂದು ಸ್ಥಳೀಯ ವೈದ್ಯಾಧಿಕಾರಿ ತಿಳಿಸಿದ್ದಾರೆ.

ADVERTISEMENT

ಒಂದು ನಿಗದಿತ ವಿಳಾಸದಲ್ಲಿ ಕನಿಷ್ಠ 10 ಜನರು ನೋಂದಾಯಿಸಿ ಕೊಂಡಾಗ ಮಾತ್ರ ಲಸಿಕಾ ವ್ಯಾನ್ ಜನರ ಮನೆ ಬಳಿ ತೆರಳಿ ಲಸಿಕೆ ಹಾಕುತ್ತದೆ. ಇದರಿಂದ ಡೋಸ್‌ಗಳು ವ್ಯರ್ಥವಾಗುವುದಿಲ್ಲ. ಕೋವಿಡ್-19 ಲಸಿಕೆಯ ಒಂದು ಸೀಸೆಯಿಂದ ಹತ್ತು ಜನರಿಗೆ ತಲಾ ಒಂದು ಡೋಸ್ ನೀಡಬಹುದು. ಲಸಿಕೆ ಹಾಕಿದ ಬಳಿಕ ನಿಗಾ ವಹಿಸಲು ವೈದ್ಯರ ತಂಡ ಕೆಲ ಹೊತ್ತು ಸ್ಥಳದಲ್ಲಿ ಮೊಕ್ಕಂ ಹೂಡಿರುತ್ತದೆ ಎಂದುವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.