ADVERTISEMENT

ಡೀಪ್‌ಫೇಕ್ ನಿಯಂತ್ರಣ ಮಸೂದೆ ಮಂಡನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 13:39 IST
Last Updated 6 ಡಿಸೆಂಬರ್ 2025, 13:39 IST
<div class="paragraphs"><p>ಡೀಪ್‌ಫೇಕ್</p></div>

ಡೀಪ್‌ಫೇಕ್

   

ನವದೆಹಲಿ: ಡೀಪ್‌ಫೇಕ್‌ ನಿಯಂತ್ರಣಕ್ಕೆ ಸೂಕ್ತ ಕಾನೂನು ರೂಪಿಸುವಂತೆ ಸಂಸದರೊಬ್ಬರು ಕೋರಿರುವ ಮಸೂದೆಯೊಂದು ಲೋಕಸಭೆಯಲ್ಲಿ ಮಂಡನೆಯಾಗಿದೆ.

ಡೀಪ್‌ಫೇಕ್ ಮೊರೆಹೋಗುವವರಿಗೆ ಪೂರ್ವಾನುಮತಿ ಕಡ್ಡಾಯಗೊಳಿಸುವ ಮೂಲಕ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸುವ ಡೀಪ್‌ಫೇಕ್ ನಿಯಂತ್ರಣ ಮಸೂದೆಯನ್ನು ಶಿವಸೇನಾ ಸಂಸದ ಶ್ರೀಕಾಂತ್ ಶಿಂದೆ ಅವರು ಶುಕ್ರವಾರ ಮಂಡಿಸಿದರು. 

ADVERTISEMENT

‘ದೌರ್ಜನ್ಯ, ವಂಚನೆ ಮತ್ತು ಸುಳ್ಳುಸುದ್ದಿಗಳನ್ನು ಹರಡಲು ಡೀಪ್‌ಫೇಕ್‌ ದುರ್ಬಳಕೆ ಹೆಚ್ಚುತ್ತಿದೆ. ಅದನ್ನು ತಡೆಯಲು ಸೂಕ್ತ ಕಾನೂನು ರೂಪಿಸುವ ಅಗತ್ಯ ಇದೆ’ ಎಂದು ಶ್ರೀಕಾಂತ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.