ADVERTISEMENT

ಬಿಟ್‌ಕಾಯಿನ್‌ ಹಗರಣ: ಜನರಿಗೆ ₹2.5 ಕೋಟಿ ವಂಚಿಸಿದ ವ್ಯಕ್ತಿ ಬಂಧನ

ಬಿಟ್‌ಕಾಯಿನ್‌ ಹಗರಣ

ಪಿಟಿಐ
Published 1 ಜನವರಿ 2021, 16:26 IST
Last Updated 1 ಜನವರಿ 2021, 16:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡುವುದಾಗಿ ಹೇಳಿ ನೂರಾರು ಜನರಿಗೆ ₹ 2.5 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಉಮೇಶ್‌ ವರ್ಮಾ (60) ಬಂಧಿತ ಆರೋಪಿ. ದುಬೈನಿಂದ ಹಿಂದಿರುಗಿದ ವರ್ಮಾ ಅವರನ್ನು ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿದೆ.

ಈವರೆಗೆ ವರ್ಮಾ ವಿರುದ್ಧ 45 ಜನರು ದೂರು ನೀಡಿದ್ದಾರೆ. ವರ್ಮಾ ಹಾಗೂ ಆತನ ಮಗ ಭರತ್‌ ವರ್ಮಾ ಪ್ಲುಟೊ ಎಕ್ಸ್‌ಚೇಂಜ್‌ ಹೆಸರಿನಲ್ಲಿ ಕಂಪನಿ ಸ್ಥಾಪಿಸಿ, ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡುವ ಯೋಜನೆ ಹೆಸರಿನಲ್ಲಿ ಹಣ ಸಂಗ್ರಹಿಸಿ, ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಪ್ರತಿ ತಿಂಗಳು ಶೇ 20–30ರಷ್ಟು ಲಾಭ ನೀಡುವುದಾಗಿ ಆರೋಪಿಗಳು ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿದಂತೆ ಯಾವುದೇ ಲಾಭ ನೀಡಲಿಲ್ಲ. ಕೆಲವು ದಿನಗಳ ನಂತರ ಕಚೇರಿಗಳನ್ನು ಬಂದ್‌ ಮಾಡಿದರು. ತಮ್ಮ ವಾಸಸ್ಥಳದ ವಿಳಾಸವನ್ನೂ ಪದೇಪದೇ ಬದಲಾಯಿಸುತ್ತಿದ್ದ ಅವರು ಕೊನೆಗೆ ದುಬೈಗೆ ಓಡಿ ಹೋದರು’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.