ADVERTISEMENT

ಚುನಾವಣಾಪೂರ್ವ ಮೈತ್ರಿ: ಬಿಜೆಪಿ, ಬಿಜೆಡಿ ಸುಳಿವು

ಪಿಟಿಐ
Published 6 ಮಾರ್ಚ್ 2024, 18:46 IST
Last Updated 6 ಮಾರ್ಚ್ 2024, 18:46 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ಭುವನೇಶ್ವರ: ಲೋಕಸಭೆ ಹಾಗೂ ಒಡಿಶಾ ವಿಧಾನಸಭೆ ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ಹಾಗೂ ಬಿಜೆಡಿ ಪಕ್ಷಗಳು ಬುಧವಾರ ಸುಳಿವು ನೀಡಿವೆ.

ಈ ಕುರಿತು ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಆದರೆ, ಉಭಯ ಪಕ್ಷಗಳ ನಾಯಕರು ಇಂತಹ ನಡೆ ಕುರಿತು ಸುಳಿವು ನೀಡಿದ್ದಾರೆ.

ADVERTISEMENT

ಬಿಜೆಡಿ ನಾಯಕರು ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನಿವಾಸದಲ್ಲಿ ಸುದೀರ್ಘ ಸಭೆ ನಡೆಸಿದರು. ಅತ್ತ, ನವದೆಹಲಿಯಲ್ಲಿ ಬಿಜೆಪಿ ನಾಯಕರು ಕೂಡ ಚುನಾವಣೆ ಕುರಿತು ಬಿರುಸಿನ ಚರ್ಚಿಸಿದ್ದಾರೆ. ಉಭಯ ಪಕ್ಷಗಳ ನಡುವೆ ಚುನಾವಣಾಪೂರ್ವ ಮೈತ್ರಿ ಬಗ್ಗೆಯೂ ಈ ಸಭೆಗಳಲ್ಲಿ ಚರ್ಚೆ ನಡೆಯಿತು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.