ರಾಹುಲ್ ಗಾಂಧಿ
–ಪಿಟಿಐ ಚಿತ್ರ
ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ತಮ್ಮ ರಾಜಕೀಯ ಅನುಕೂಲಕ್ಕೆ ಬಳಸಿಕೊಂಡರು. ಅಲ್ಲದೆ ಇಡೀ ದೇಶವೇ ಅವರ ಸಾವಿನ ಶೋಕಾರಚಣೆಯಲ್ಲಿರುವಾಗ ಹೊಸ ವರ್ಷಾಚರಣೆಗೆ ವಿಯೆಟ್ನಾಂಗೆ ತೆರೆಳಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
‘ಮನಮೋಹನ ಸಿಂಗ್ ಅವರ ನಿಧನಕ್ಕೆ ದೇಶ ಶೋಕಾಚರಣೆ ನಡೆಸುತ್ತಿರುವಾಗ, ಹೊಸ ವರ್ಷಾಚರಣೆಗೆ ರಾಹುಲ್ ಗಾಂಧಿ ವಿಯೆಟ್ನಾಂಗೆ ಹಾರಿದ್ದಾರೆ. ಡಾ. ಸಿಂಗ್ ಅವರ ಸಾವನ್ನು ರಾಹುಲ್ ಗಾಂಧಿ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡರು. ಇದು ಸಿಂಗ್ ಬಗ್ಗೆ ಅವರಿಗಿರುವ ತಿರಸ್ಕಾರದ ಪ್ರತೀಕ’ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
‘ಗಾಂಧಿಗಳು ಹಾಗೂ ಕಾಂಗ್ರೆಸ್ ಸಿಖ್ ದ್ವೇಷಿಗಳು. ಇಂದಿರಾ ಗಾಂಧಿಯವರು ದರ್ಬಾರ್ ಸಾಹಿಬ್ ಅನ್ನು ಅಪವಿತ್ರಗೊಳಿಸಿದ್ದನ್ನು ಮರೆಯಬಾರದು’ ಎಂದು ಮಾಳವೀಯ ಬರೆದುಕೊಂಡಿದ್ದಾರೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಮಣಿಕಂ ಟಾಗೋರ್, ‘ತಿರುಚುವ ರಾಜಕೀಯವನ್ನು ಸಂಘಿಗಳು ಯಾವಾಗ ನಿಲ್ಲಿಸುತ್ತಾರೆ?’ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಯುಮುನ ನದಿ ದಡದಲ್ಲಿ ಡಾ. ಸಿಂಗ್ ಅವರ ಅಂತ್ಯಸಂಸ್ಕಾರ ಮಾಡುವುದಕ್ಕೆ ಪ್ರಧಾನಿ ಮೋದಿ ನಿರಾಕರಿಸಿದರು. ಸಚಿವರು ಸಿಂಗ್ ಕುಟುಂಬವನ್ನು ನಾಚಿಗೆ ಇಲ್ಲದೆ ಮೂಲೆಗುಂಪು ಮಾಡಿದರು. ರಾಹುಲ್ ಗಾಂಧಿ ಖಾಸಗಿಯಾಗಿ ಪ್ರಯಾಣಿಸಿದರೆ ನಿಮಗೇನು ಸಮಸ್ಯೆ? ಹೊಸ ವರ್ಷದಲ್ಲಿಯಾದರೂ ಸರಿಯಾಗಿ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.