ADVERTISEMENT

ಹರಿಯಾಣ: ಟಿಕೆಟ್‌ಗಾಗಿ ಕಾಂಗ್ರೆಸ್‌ನಿಂದ ₹7 ಕೋಟಿ ಸುಲಿಗೆ- ಬಿಜೆಪಿ ಆರೋಪ

ಪಿಟಿಐ
Published 3 ಮಾರ್ಚ್ 2026, 16:24 IST
Last Updated 3 ಮಾರ್ಚ್ 2026, 16:24 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ಪಿಟಿಐ ಚಿತ್ರ

ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡಲು ಕಾಂಗ್ರೆಸ್‌ ಪಕ್ಷ ಹರಿಯಾಣದ ಮಾಜಿ ಮಹಿಳಾ ಕಾಂಗ್ರೆಸ್‌ ನಾಯಕಿಯ ಪತಿಯಿಂದ ₹ 7ಕೋಟಿ ಸುಲಿಗೆ ಮಾಡಲು ಯತ್ನಿಸಿದೆ ಎಂದು ಬಿಜೆಪಿ ಆರೋಪಿಸಿದೆ.

ADVERTISEMENT

ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್‌ ಭಂಡಾರಿ, ಹರಿಯಾಣದ ರಾಜ್ಯ ಮಹಿಳಾ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿಯ ಪತಿ ಗೌರವ್ ಕುಮಾರ್‌ ಅವರ ಹೇಳಿಕೆಯನ್ನು ಆಧರಿಸಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದರು.  

‘ಗೌರವ್‌ ಕುಮಾರ್, ತನ್ನ‌ ಪತ್ನಿಗೆ ಬವಾಲ್ ವಿಧಾನಸಭಾ ಸ್ಥಾನದಿಂದ ಪಕ್ಷದ ಟಿಕೆಟ್ ನೀಡುವ ಸಲುವಾಗಿ ಗಾಂಧಿ ಕುಟುಂಬವು ಹೇಗೆ ತಮ್ಮಿಂದ‌ ₹7 ಕೋಟಿ ಸುಲಿಗೆ ಮಾಡಲು ಹೇಗೆ ಪ್ರಯತ್ನಿಸಿತು ಎಂಬುದನ್ನು ವಿವರಿಸಿದ್ದಾರೆ’ ಎಂದು ಭಂಡಾರಿ ವಿವರಿಸಿದರು.

‘ಗೌರವ್‌ ಕುಮಾರ್ ಅವರು, ಸುದ್ದಿಗೋಷ್ಠಿಯೊಂದರಲ್ಲಿ ಪ್ರಿಯಾಂಕಾ ವಾದ್ರಾ, ಕೆ.ಸಿ. ವೇಣುಗೋಪಾಲ್ ಮತ್ತು ಕೆ. ಸುರೇಶ್ ಅವರ ಆಪ್ತ ಸಹಾಯಕರೊಂದಿಗೆ ನಡೆಸಿರುವ ವಾಟ್ಸಾಪ್ ಚರ್ಚೆಗಳನ್ನು ಬಹಿರಂಗಪಡಿಸಿದ್ದಾರೆ. ಹರಿಯಾಣದ ಕಾಂಗ್ರೆಸ್‌ನ ಮಾಜಿ ನಾಯಕಿಯಿಂದ ಹಣ ಸುಲಿಗೆ ಮಾಡಲು ಗಾಂಧಿ ಕುಟುಂಬವು ವೇಣುಗೋಪಾಲ್ ಅವರನ್ನು ಹೇಗೆ ಬಳಸಿಕೊಂಡಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ಚರ್ಚೆಗಳು  ಗಾಂಧಿ ಕುಟುಂಬದ ‘ಭ್ರಷ್ಟಾಚಾರ’ದ  ‘ಪ್ರಾಥಮಿಕ ಪುರಾವೆ’ಗಳಾಗಿವೆ ಎಂದು ಅವರು ಬಣ್ಣಿಸಿದ್ದಾರೆ.‘ ಎಂದು ಭಂಡಾರಿ ಹೇಳಿದರು.

‘ಪ್ರಿಯಾಂಕಾ ವಾದ್ರಾ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಭ್ರಷ್ಟಾಚಾರದ ಪ್ರಾಥಮಿಕ ಪುರಾವೆಗಳನ್ನು ನಾವು ನಿಮ್ಮ ಮುಂದೆ ಪ್ರಸ್ತುತಪಡಿಸು ತ್ತಿದ್ದೇವೆ‘ ಎಂದು ಭಂಡಾರಿ ಹೇಳಿದರು. ಆದರೆ, ಕಾಂಗ್ರೆಸ್ ನಾಯಕಿಯ ಹೆಸರನ್ನು ಅವರು ಬಹಿರಂಗಪಡಿಸಿಲ್ಲ. ಈ ಆರೋಪ ಯಾವ ಅವಧಿಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ್ದು ಎಂದೂ ಸ್ಪಷ್ಟಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.