ADVERTISEMENT

ಸವಾಲು ಎದುರಿಸಲು ಸಜ್ಜಾಗಿ–AIADMK ಕೈ ಕೊಟ್ಟ ನಂತರ ಕಾರ್ಯಕರ್ತರಿಗೆ ಅಣ್ಣಾಮಲೈ ಕರೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2023, 14:44 IST
Last Updated 26 ಸೆಪ್ಟೆಂಬರ್ 2023, 14:44 IST
ಕೆ. ಅಣ್ಣಾಮಲೈ
ಕೆ. ಅಣ್ಣಾಮಲೈ   

ಕೊಯಮತ್ತೂರು: ‘ಬಿಜೆಪಿಗೆ ಮುಂದಿನ ದಿನಗಳು ಸವಾಲಿನದಾಗಿದ್ದು, ಎಲ್ಲ ರೀತಿ ಜನರನ್ನು ಎದುರಿಸಲು ಸಜ್ಜಾಗಬೇಕಿದೆ‘ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ. ರಾಜಕೀಯ ಬದಲಾವಣೆಗೆ ಪಕ್ಷ ಈ ತೊಡಕು ದಾಟುವ ವಿಶ್ವಾಸವಿದೆ ಎಂದಿದ್ದಾರೆ.

‘ನಾನು ವೈಯಕ್ತಿಕವಾಗಿ ಜನರನ್ನು ಎದುರಿಸಲು ಸಜ್ಜಾಗಿದ್ದೇನೆ. ಕಾರ್ಯಕರ್ತರು ಕೂಡಾ ಇದಕ್ಕಾಗಿ ಸಿದ್ಧರಾಗಬೇಕಿದ್ದು, ಬದಲಾವಣೆ ತರಲು ಸಜ್ಜಾಗಬೇಕು‘ ಎಂದು ಕಿವಿಮಾತು ಹೇಳಿದ್ದಾರೆ. ಪರೋಕ್ಷವಾಗಿ ಎಐಎಡಿಎಂಕೆ ಪಕ್ಷವನ್ನು ಉ‌ಲ್ಲೇಖಿಸಿ ಈ ಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT