ADVERTISEMENT

ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ: ಕಾಂಗ್ರೆಸ್‌

ಪಿಟಿಐ
Published 30 ಆಗಸ್ಟ್ 2019, 16:50 IST
Last Updated 30 ಆಗಸ್ಟ್ 2019, 16:50 IST
ರಣದೀಪ್‌ ಸುರ್ಜೇವಾಲ 
ರಣದೀಪ್‌ ಸುರ್ಜೇವಾಲ    

ನವದೆಹಲಿ: ದೇಶವನ್ನು ಬಿಜೆಪಿ ಆರ್ಥಿಕ ತುರ್ತು ಪರಿಸ್ಥಿತಿಗೆ ದೂಡಿದೆ ಕಾಂಗ್ರೆಸ್‌ ಆರೋಪಿಸಿದೆ.

‘ಕುಸಿದಿರುವ ಆರ್ಥಿಕತೆ ಹಾಗೂ ತನ್ನವೈಫಲ್ಯಗಳನ್ನು ಮುಚ್ಚಿಕೊಳ್ಳಲುಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ(ಆರ್‌ಬಿಐ)₹1.76 ಲಕ್ಷ ಕೋಟಿಯನ್ನುಬಿಜೆಪಿ ಸರ್ಕಾರ ಬಲವಂತವಾಗಿಪಡೆದಿದೆ. ಆರ್‌ಬಿಐ ತುರ್ತು ನಿಧಿ ಕಳೆದ ಆರು ವರ್ಷದಲ್ಲೇ ಇಷ್ಟು ಕಡಿಮೆಯಾಗಿರಲಿಲ್ಲ’ ಎಂದು ಮಾಧ್ಯಮದ ವರದಿಯೊಂದನ್ನು ಉಲ್ಲೇಖಿಸಿಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸಿಂಗ್ ಸುರ್ಜೇವಾಲ ಟ್ವೀಟ್‌ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಹೆಚ್ಚುತ್ತಿರುವ ಬ್ಯಾಂಕ್‌ ವಂಚನೆ ಪ್ರಕರಣಗಳ ಬಗ್ಗೆ ಉಲ್ಲೇಖಿಸಿರುವ ಸುರ್ಜೇವಾಲ, ‘ನವ ಭಾರತ’ದಲ್ಲಿ ಲೂಟಿ ಮತ್ತು ವಂಚನೆ ಮಾಡಿ ಪರಾರಿ’ ಪ್ರಕರಣಗಳು ಏರಿಕೆಯಾಗುತ್ತಿವೆ. ಆದರೆ ಜನರ ಮೇಲೆ ತೆರಿಗೆ ಇಳಿಕೆಯಾಗಿಲ್ಲ’ ಎಂದಿದ್ದಾರೆ.

ADVERTISEMENT

ಇತ್ತೀಚೆಗೆ ಆರ್‌ಬಿಐ ಬಿಡುಗಡೆಗೊಳಿಸಿದ್ದ ವಾರ್ಷಿಕ ವರದಿಯಲ್ಲಿ 2018–19ನೇ ಸಾಲಿನಲ್ಲಿವಂಚನೆ ಪ್ರಕರಣಗಳು ಶೇ. 15 ಏರಿಕೆಯಾಗಿರುವುದನ್ನು ತಿಳಿಸಲಾಗಿತ್ತು. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ವಂಚನೆಗೈದಿರುವ ಮೊತ್ತ ₹41,167 ಕೋಟಿಯಿಂದ ₹71,543 ಕೋಟಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.