ಫರೂಖಾಬಾದ್: ಬಿಜೆಪಿಯು ಜಾತಿ ಮತ್ತು ಧರ್ಮದ ಅಧಾರದ ಮೇಲೆ ಸಂಘರ್ಷವನ್ನು ಪ್ರಚೋದಿಸುತ್ತದೆ ಹಾಗೂ ನಕಾರಾತ್ಮಕ ರಾಜಕಾರಣದಲ್ಲಿ ತೊಡಗಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಆರೋಪಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಉತ್ತರ ಪ್ರದೇಶ ಬಿಜೆಪಿ ಸರ್ಕಾರವು ಹಳೆಯ ತುರ್ತು ಪರಿಸ್ಥಿತಿಗೆ ಅಡಿಪಾಯ ಹಾಕುತ್ತಿದೆ. ಆಗ ಘೋಷಿತ ತುರ್ತು ಪರಿಸ್ಥಿತಿ ಇತ್ತು. ಈಗ ದೇಶದಾದ್ಯಂತ ಅಘೋಷಿತ ತುರ್ತು ಪರಿಸ್ಥಿತಿ ಹೇರಲಾಗಿದೆ’ ಎಂದರು.
‘ಬಿಜೆಪಿ ಆಡಳಿತದಲ್ಲಿ ಧರ್ಮ ಹಾಗೂ ಜಾತಿ ಆಧಾರಿತ ತಾರತಮ್ಯವು ವ್ಯಾಪಕವಾಗಿದೆ. ಹಣದುಬ್ಬರ ಮತ್ತು ಭ್ರಷ್ಟಾಚಾರವು ಹೆಚ್ಚಳವಾಗಿದೆ’ ಎಂದು ಹೇಳಿದರು.
ಇತ್ತೀಚೆಗೆ ಇಟಾವಾದಲ್ಲಿ ಧಾರ್ಮಿಕ ಬೋಧಕರ ಹಾಗೂ ಅವರ ಸಹಾಯಕನ ಜಾತಿ ತಿಳಿದ ಜನರ ಗುಂಪೊಂದು ಇಬ್ಬರ ತಲೆಗೆ ಥಳಿಸಿದ ಘಟನೆಯನ್ನು ಅಖಿಲೇಶ್ ಖಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.