ADVERTISEMENT

ಬಿಜೆಪಿ ಸಂಸದರಿಗೆ ‘ವಿಪ್‌’ ಜಾರಿ

ಪಿಟಿಐ
Published 9 ಫೆಬ್ರುವರಿ 2023, 14:48 IST
Last Updated 9 ಫೆಬ್ರುವರಿ 2023, 14:48 IST
   

ನವದೆಹಲಿ: ಬಜೆಟ್‌ ಅಧಿವೇಶನದ ಉಳಿದಿರುವ ಕಲಾಪಗಳಿಗೆ ತಪ್ಪದೆ ಹಾಜರಿರುವಂತೆ ಬಿಜೆಪಿ ತನ್ನ ಲೋಕಸಭಾ ಸಂಸದರಿಗೆ ‘ವಿಪ್‌’ ಜಾರಿ ಮಾಡಿದೆ.

‘ವಿಪ್‌’ ಜಾರಿ ಗುರುವಾರದಿಂದ ಜಾರಿಗೆ ಬಂದಿದೆ. ಸೋಮವಾರದವರೆಗೂ ವಿಪ್‌ ಜಾರಿಯಲ್ಲಿ ಇರಲಿದೆ. ಕಲಾ‍ಪಕ್ಕೆ ಸಂಸದರು ಕಡ್ಡಾಯವಾಗಿ ಹಾಜರಿರಬೇಕು ಎಂದು ಬಿಜೆಪಿ ತಿಳಿಸಿದೆ.

ಬಜೆಟ್‌ ಅಧಿವೇಶನ ಸೋಮವಾರ ಮುಕ್ತಾಯವಾಗಲಿದೆ. ಆದರೆ ಕೆಲವು ಪಕ್ಷಗಳು ಕಲಾಪವನ್ನು ಶುಕ್ರವಾರದವರೆಗೂ ಮುಂದುವರೆಸಬೇಕು ಎಂದು ಆಗ್ರಹಿಸಿವೆ.

ADVERTISEMENT

ಸದ್ಯ ಅಧಿವೇಶನದಲ್ಲಿ ಬಜೆಟ್‌ ಮೇಲಿನ ಚರ್ಚೆ ನಡೆಯುತ್ತಿದೆ. ಅದಾನಿ ಸಮೂಹ ಗದ್ದಲದಿಂದ ಕಲಾಪವನ್ನು ಹಲವು ಸಲ ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.