ADVERTISEMENT

ಗುಂಡು ಹಾರಿಸಿ ಬಿಜೆಪಿ ಮುಖಂಡನ ಹತ್ಯೆ

ಪಿಟಿಐ
Published 7 ನವೆಂಬರ್ 2022, 14:27 IST
Last Updated 7 ನವೆಂಬರ್ 2022, 14:27 IST
.
.   

ಕಥಿಹಾರ್‌: ಬಿಹಾರದ ಕಥಿಹಾರ್‌ ಜಿಲ್ಲೆಯ ತೇಲ್ತಾ ಪ್ರದೇಶದಲ್ಲಿ ಬಿಜೆಪಿ ಮುಖಂಡ ಸಂಜೀವ್ ಮಿಶ್ರಾ ಎಂಬುವವರನ್ನು ಅವರ ಮನೆಯ ಬಳಿಯೇ ದುಷ್ಕರ್ಮಿಗಳು ಸೋಮವಾರ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪರಿಷದ್‌ ಮಾಜಿ ಸದಸ್ಯ ಸಂಜೀವ್‌ ಮಿಶ್ರಾ ಅವರು ತಮ್ಮ ಮನೆಯ ಮುಂಭಾಗದಲ್ಲಿ ಜನರೊಂದಿಗೆ ಮಾತನಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT