ADVERTISEMENT

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ

ಪಿಟಿಐ
Published 8 ಮಾರ್ಚ್ 2021, 1:57 IST
Last Updated 8 ಮಾರ್ಚ್ 2021, 1:57 IST
ಪ್ರಾತಿನಿಧಿಕ ಚಿತ್ರ (ಏಜೆನ್ಸೀಸ್)
ಪ್ರಾತಿನಿಧಿಕ ಚಿತ್ರ (ಏಜೆನ್ಸೀಸ್)   

ಹರಿಂಗಾಟಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ನಾದಿಯ ಜಿಲ್ಲೆಯ ಹರಿಂಗಾಟಾ ಎಂಬಲ್ಲಿ 32 ವರ್ಷದ ಸ್ಥಳೀಯ ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಕಪಿಲೇಶ್ವರ ಸಂತೋಷ್‌ಪುರದ ಚಹಾ ಅಂಗಡಿಯೊಂದರ ಬಳಿ ಗಾಯಗೊಂಡ ಸ್ಥಿತಿಯಲ್ಲಿ ಸಂಜಯ್‌ ದಾಸ್‌ ಪತ್ತೆಯಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ರಣಘಾಟ್ ಎಸ್‌ಪಿ ವಿ.ಎಸ್.ಆರ್ ಅನಂತ್‌ನಾಗ್ ತಿಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಸಂಜಯ್‌ ದಾಸ್‌ ಹರಿಂಗಾಟಾ ನಗರಸಭೆಯ ವಾರ್ಡ್‌ ನಂ.10ರ ಬಿಜೆಪಿ ಬೂತ್‌ ಅಧ್ಯಕ್ಷರಾಗಿದ್ದಾರೆ.

ADVERTISEMENT

'ತೃಣಮೂಲ ಕಾಂಗ್ರೆಸ್‌ನ ಗೂಂಡಾಗಳು ಈ ಕೃತ್ಯವೆಸಗಿದ್ದಾರೆ,' ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪವನ್ನು ಆಡಳಿತಾರೂಢ ಟಿಎಂಸಿ ನಿರಾಕರಿಸಿದೆ. ಇದು ಬಿಜೆಪಿಯೊಳಗಿನ ಗುಂಪಿನ ಸದಸ್ಯರಲ್ಲಿ ನಡೆದ ಘರ್ಷಣೆಯ ಪರಿಣಾಮ ಎಂದು ಹೇಳಿದೆ.

'ಕಪಿಲೇಶ್ವರ ಸಂತೋಷ್‌ಪುರದ ಚಹಾದಂಗಡಿ ಬಳಿ ವಾಹನ ನಿಲ್ಲಿಸಿದಾಗ ಸ್ವಲ್ಪ ದೂರದಲ್ಲಿ ಒಂದು ಗುಂಪು ಕುಳಿತಿತ್ತು. ಪೊಲೀಸರನ್ನು ನೋಡುತ್ತಲೇ ಗುಂಪಿನಲ್ಲಿದ್ದವರು ಓಡಿ ಹೋದರು. ಒಬ್ಬ ಮಾತ್ರ ಅಲ್ಲಿಯೇ ಇದ್ದ. ಸಮೀಪಕ್ಕೆ ತೆರಳಿ ನೋಡಿದಾಗ ಆತ ರಕ್ತದ ಮಡುವಿನಲ್ಲಿದ್ದ,' ಎಂದು ಎಸ್‌ಪಿ ಅನಂತ್‌ ನಾಗ್‌ ತಿಳಿಸಿದ್ದಾರೆ.

ಗುಂಪಿನಲ್ಲಿದ್ದವರು ತನ್ನ ಮೇಲೆ ಗುಂಡು ಹಾರಿಸಿದ್ದಾಗಿಯೂ, ಅದು ತನ್ನ ಸೋಂಟದ ಭಾಗಕ್ಕೆ ತಗುಲಿರುವುದಾಗಿಯೂ ಬಿಜೆಪಿ ಮುಖಂಡ ಸಂಜಯ್‌ ದಾಸ್‌ ತಿಳಿಸಿದ್ದರು ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

ಸಂಜಯ್‌ ದಾಸ್‌ ಸದ್ಯ ಅಪಾಯದಿಂದ ಪಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.