ADVERTISEMENT

ಲಾಠಿ ಪ್ರಹಾರ: ರಾಜಾ ಸಿಂಗ್ ಆರೋಪ

ಪೂರ್ವಾನುಮತಿಯಿಲ್ಲದೇ ಪ್ರತಿಮೆ ಮರುಪ್ರತಿಷ್ಠಾಪನೆಗೆ ಯತ್ನ

ಪಿಟಿಐ
Published 20 ಜೂನ್ 2019, 20:39 IST
Last Updated 20 ಜೂನ್ 2019, 20:39 IST

ಹೈದರಾಬಾದ್: ‘ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅವಂತಿಬಾಯಿ ಲೋಧಿ ಅವರ ಪ್ರತಿಮೆ ಮರು ಪ್ರತಿಷ್ಠಾಪನೆ ಸಂದರ್ಭದಲ್ಲಿ ನನ್ನ ಹಾಗೂ ಬೆಂಬಲಿಗರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ’ ಎಂದು ಬಿಜೆಪಿ ಶಾಸಕ ಟಿ.ರಾಜಾಸಿಂಗ್ ಲೋಧ್ ಆರೋಪಿಸಿದ್ದಾರೆ.

ಆದರೆ, ರಾಜಾಸಿಂಗ್ ಅವರ ಆರೋಪವನ್ನು ಪೊಲೀಸರು ಅಲ್ಲಗಳೆದಿದ್ದು,‘ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಜಾಸಿಂಗ್ ತಮ್ಮ 200 ಬೆಂಬಲಿಗರೊಂದಿಗೆಜುಮಾರತ್ ಬಜಾರ್‌ನಲ್ಲಿ ರಾಣಿ ಅವಂತಿ ಬಾಯಿ ಅವರ ಪ್ರತಿಮೆ ಮರು ಪ್ರತಿಷ್ಠಾಪಿಸಲು ಯತ್ನಿಸಿದರು. ಆದರೆ, ಇದಕ್ಕಾಗಿ ಅವರು ಯಾವುದೇ ಪೂರ್ವಾನುಮತಿ ಪಡೆಯದೇ ಕಾನೂನು ಉಲ್ಲಂಘಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಶಾಸಕರ ಆರೋಪವನ್ನು ನಿರಾಕರಿಸಿರುವ ಡಿಜಿಪಿ ಶ್ರೀನಿವಾಸ್, ‘ರಾಜಾಸಿಂಗ್ ಸ್ವಯಂಪ್ರೇರಿತರಾಗಿ ಗಾಯ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.