ADVERTISEMENT

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವೇತನ ಮುಂದುವರಿಯಲಿ: ಬಿಜೆಪಿ ಸಂಸದೆ

ಪಿಟಿಐ
Published 15 ಡಿಸೆಂಬರ್ 2022, 16:07 IST
Last Updated 15 ಡಿಸೆಂಬರ್ 2022, 16:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೀಡುತ್ತಿದ್ದ ’ಮೌಲಾನಾ ಆಜಾದ್‌’ ವಿದ್ಯಾರ್ಥಿ ವೇತನವನ್ನು ಮುಂದುವರಿಸಬೇಕು ಎಂದು ಬಿಜೆಪಿ ಸಂಸದೆ ಪ್ರೀತಮ್‌ ಮುಂಡೆ ಅವರು ಗುರುವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಯಾವುದೇ ಪೂರ್ವ ಮಾಹಿತಿ ಇಲ್ಲದೆ ವಿದ್ಯಾರ್ಥಿವೇತನವನ್ನು ರದ್ದು ಮಾಡಲಾಗಿದೆ. ಇದರಿಂದ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸರ್ಕಾರದ ಮೆಟ್ರಿಕ್‌ ಪೂರ್ವ ವೇತನ ಯೋಜನೆ ಕೂಡ ಅನ್ವಯವಾಗುವುದಿಲ್ಲ. ಈ ವರ್ಷವೂ ಸಾವಿರಾರು ವಿದ್ಯಾರ್ಥಿಗಳು ವೇತನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಶಿಕ್ಷಣ ಎನ್ನುವುದು ಎಲ್ಲರಿಗೂ ಉಚಿತ. ವಿದ್ಯಾರ್ಥಿ ವೇತನ ಅದಕ್ಕೆ ಪ್ರೋತ್ಸಾಹವಿದ್ದಂತೆ. ಮಕ್ಕಳನ್ನು ಬಾಲಕಾರ್ಮಿಕತೆಯೆಡೆಗೆ ತಳ್ಳಬೇಡಿ. ವಿದ್ಯೆ ಕಲಿಯಲಿ. ಮತ್ತೊಮ್ಮೆ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT