ADVERTISEMENT

ಶಬರಿಮಲೆಗೆ ಮಹಿಳೆಯರ ಪ್ರವೇಶ: ಹರ್ಷ ವ್ಯಕ್ತಪಡಿಸಿದ ಬಿಜೆಪಿ ಸಂಸದ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 14:06 IST
Last Updated 2 ಜನವರಿ 2019, 14:06 IST
ಉದಿತ್ ರಾಜ್  (ಕೃಪೆ: ಎಎನ್‍ಐ)
ಉದಿತ್ ರಾಜ್ (ಕೃಪೆ: ಎಎನ್‍ಐ)   

ನವದೆಹಲಿ: ಮಹಿಳೆಯರಿಗೆ ಪ್ರಾರ್ಥಿಸುವ ಹಕ್ಕು ಇದೆ.ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿರುವುದು ನನಗೆ ಸಂತೋಷವಾಗಿದೆ.ಸತಿ ಮತ್ತು ವರದಕ್ಷಿಣಿ ಪಿಡುಗುಗಳೂ ನಾಶವಾಗಬೇಕು ಎಂದು ಬಿಜೆಪಿ ಸಂಸದಉದಿತ್ ರಾಜ್ ಹೇಳಿದ್ದಾರೆ.

ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವುದನ್ನು ಖಂಡಿಸಿ ಕೇರಳದಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವಾಗ ದೆಹಲಿಯ ಸಂಸದ ಮಹಿಳೆಯರ ಶಬರಿಮಲೆ ಪ್ರವೇಶವನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ.

ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಖಂಡಿಸುತ್ತಿರುವರನ್ನು ಟೀಕಿಸಿದ ಉದಿತ್ ರಾಜ್, ಪುರುಷರು ಮಹಿಳೆಯ ಗರ್ಭದಿಂದಲೇ ಹುಟ್ಟಿರುವಾಗ ಮಹಿಳೆ ಹೇಗೆ ಅಪವಿತ್ರ ಆಗುತ್ತಾಳೆ. ದೇವರು ದೇವಾಲಯದ ಹೊರಗೂ ಇದ್ದಾರೆ. ಸಂವಿಧಾನದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನರು ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.