ADVERTISEMENT

ಬಿಜೆಪಿ ಮಾತ್ರ ರಾಷ್ಟ್ರೀಯ ಪಕ್ಷವಾಗಿ ಹೋರಾಡುತ್ತಿದೆ: ಜೆ.ಪಿ ನಡ್ಡಾ

ಪ್ರಾದೇಶಿಕ ಪಕ್ಷಗಳನ್ನು ಕುಟುಂಬ ಪಕ್ಷಗಳಾಗಿ ಪರಿವರ್ತಿಸಲಾಗಿದೆ– ಜೆ.ಪಿ ನಡ್ಡಾ.

ಪಿಟಿಐ
Published 6 ಅಕ್ಟೋಬರ್ 2023, 12:32 IST
Last Updated 6 ಅಕ್ಟೋಬರ್ 2023, 12:32 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ಹೈದರಾಬಾದ್‌: 'ದೇಶದಾದ್ಯಂತ ಕುಟುಂಬ ಆಧರಿತ ಪಕ್ಷಗಳ ನಡುವೆ ರಾಷ್ಟ್ರೀಯ ಪಕ್ಷವಾಗಿ ಹೋರಾಡುತ್ತಿರುವ ಏಕೈಕ ಪಕ್ಷ ಬಿಜೆಪಿ. ಅದು ಬಲಿಷ್ಠ ರಾಷ್ಟ್ರಕ್ಕಾಗಿ ಪ್ರತಿ ರಾಜ್ಯದಲ್ಲೂ ಶ್ರಮಿಸುತ್ತಿದೆ' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದರು.

ಇಂದು ನಗರದ ಹೊರವಲಯದಲ್ಲಿ ಬಿಜೆಪಿಯ ತೆಲಂಗಾಣ ಘಟಕದ ರಾಜ್ಯ ಕೌನ್ಸಿಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಪ್ರತಿಯೊಬ್ಬ ಮತದಾರನ ಬಳಿ ತೆರಳಿ ಮೋದಿ ಸರ್ಕಾರದ ಸಾಧನೆಗಳನ್ನು ತಲುಪಿಸುವಂತೆ ಪಕ್ಷದ ಮುಖಂಡರಿಗೆ ಸೂಚನೆ ನೀಡಿದರು.

ಉದಾಹರಣೆಗಳನ್ನು ಉಲ್ಲೇಖಿಸಿದ ನಡ್ಡಾ, 'ಪ್ರಾದೇಶಿಕ ಪಕ್ಷಗಳು ಕುಟುಂಬ ಪಕ್ಷಗಳಾಗಿ ಪರಿವರ್ತನೆಗೊಂಡಿವೆ. ಆದರೆ ಸದ್ಯ ರಾಷ್ಟ್ರೀಯ ಪಕ್ಷವಾಗಿ ಹೋರಾಡುತ್ತಿರುವ ಏಕೈಕ ರಾಜಕೀಯ ಪಕ್ಷವೆಂದರೆ ಅದು ಭಾರತೀಯ ಜನತಾ ಪಕ್ಷ. ಮುಂದಿನ ದಿನಗಳಲ್ಲಿ ಪ್ರತಿ ರಾಜ್ಯದಲ್ಲೂ ಬಿಜೆಪಿಯ ಸಿದ್ದಾಂತವನ್ನು ಜನರು ಒಪ್ಪಿ ನಮಗೆ ಮತ ಹಾಕಲಿದ್ದಾರೆ. ಅದರಲ್ಲಿ ಯಾವುದೇ ಸಂಶಯ ಬೇಡ' ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಮತ್ತು ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ. ಕಿಶನ್ ರೆಡ್ಡಿ ಮತ್ತು ಇತರ ಹಿರಿಯ ನಾಯಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.