ADVERTISEMENT

ಡಿಡಿಸಿ ಚುನಾವಣೆ: ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ, 70 ಸಾವಿರ ಉದ್ಯೋಗದ ಭರವಸೆ

ಪಿಟಿಐ
Published 27 ನವೆಂಬರ್ 2020, 4:29 IST
Last Updated 27 ನವೆಂಬರ್ 2020, 4:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ/ ಜಮ್ಮು: ಭಾರತೀಯ ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಮೊದಲ ಬಾರಿಗೆ ನಡೆಯುತ್ತಿರುವ ಚುನಾವಣೆಗೆ ಜಮ್ಮು, ಕಾಶ್ಮೀರದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಬಿಜೆಪಿ ಗುರುವಾರ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಸ್ಥಳೀಯರಿಗೆ ಶೇ 100 ರಷ್ಟು ಮೀಸಲಾತಿಯೊಂದಿಗೆ 70,000 ಉದ್ಯೋಗಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ.

ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯು ಇದೇ ಮೊದಲ ಬಾರಿಗೆ ನವೆಂಬರ್ 28 ರಿಂದ ಡಿಸೆಂಬರ್ 22 ರವರೆಗೆ ನಡೆಯಲಿದೆ. 20 ಜಿಲ್ಲೆಗಳಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, 280 ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ.

ಖಾಸಗಿ ವಲಯದ ಉದ್ಯೋಗ, ಕೈಗಾರಿಕಾ ಸ್ನೇಹಿ ನೀತಿ ಹಾಗೂ ಸ್ವಚ್ಛ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತವನ್ನು ಖಾತರಿಪಡಿಸುವುದರ ಜೊತೆಗೆ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ಶತ್ರುಗಳನ್ನು 'ಗುರುತಿಸಲಾಗಿದೆ ಮತ್ತು ತಟಸ್ಥಗೊಳಿಸಲಾಗಿದೆ' ಹೀಗಾಗಿ 'ಕಲ್ಲು ಹೊಡೆಯುವ ಯುಗ' ಮುಗಿದಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಅತಿಕ್ರಮಣದಾರರಿಂದ ಭೂಮಿಯನ್ನು ಹಿಂಪಡೆಯುವುದಾಗಿ ಮತ್ತು ಹಿಂಸೆ ಮತ್ತು ಭಯೋತ್ಪಾದನೆಯ ಕಡೆಗೆ ಶೂನ್ಯ ಸಹಿಷ್ಣುತೆ ಹೊಂದುವುದಾಗಿ ಭರವಸೆ ನೀಡಿದೆ.

ADVERTISEMENT

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ದೇವಿಂದರ್ ಸಿಂಗ್ ಮಾನ್ಯಲ್ ಹಾಗೂ ಪಕ್ಷದ ಮುಖ್ಯ ವಕ್ತಾರ ವಕೀಲ ಸುನಿಲ್ ಸೇಥಿ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಪ್ರಣಾಳಿಕೆಯ ಪ್ರಕಾರ, 70,000 ಉದ್ಯೋಗಗಳನ್ನು ಒದಗಿಸಲಾಗುತ್ತಿದೆ. ಸರ್ಕಾರಿ ಉದ್ಯೋಗಗಳನ್ನು ಶೇ 100ರಷ್ಟು ಸ್ಥಳೀಯರಿಗೆ ಮೀಸಲಿಡುವ ನಿರ್ಧಾರದಿಂದಾಗಿ ಸ್ಥಳೀಯರಿಗೆ ಪ್ರಯೋಜನವಾಗಲಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಯುವಕರಿಗೆ ಉದ್ಯೋಗ ಮತ್ತು ವ್ಯಾಪಾರದ ಅವಕಾಶಗಳನ್ನು ಕಲ್ಪಿಸಲು ಖಾಸಗಿ ವಲಯದ ಹೂಡಿಕೆಗೆ ವಾಗ್ದಾನ ಮಾಡಿದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.