ADVERTISEMENT

ಬಿಜೆಪಿ, ಆರ್‌ಎಸ್‌ಎಸ್‌ ನಿಜಾವಾದ ತುಕ್ಡೇ ಗುಂಪುಗಳು: ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 16:11 IST
Last Updated 5 ಸೆಪ್ಟೆಂಬರ್ 2022, 16:11 IST
   

ಭೋಪಾಲ್‌: ‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ ದೇಶದಲ್ಲಿರುವ ನಿಜವಾದ ತುಕ್ಡೇ–ತುಕ್ಡೇ ಗುಂಪುಗಳು ಮತ್ತು ಕಾಂಗ್ರೆಸ್‌ ಹಮ್ಮಿಕೊಂಡಿರುವ ಭಾರತ ಜೋಡಿಸಿ ಯಾತ್ರೆಯು ದೇಶದ ಜನರನ್ನು ಒಗ್ಗೂಡಿಸುವ ಗುರಿ ಹೊಂದಿದೆ’ ಎಂದುಕಾಂಗ್ರೆಸ್‌ ಸೋಮವಾರ ಹೇಳಿದೆ.

ಬಿಜೆಪಿ ವಿರುದ್ಧ ಹರಿಹಾಯ್ದ ಮಧ್ಯಪ್ರದೇಶದಕಾಂಗ್ರೆಸ್‌ ವಕ್ತಾರೆ ರಾಗಿಣಿ ನಾಯಕ್‌, ‘ಬಿಜೆಪಿಯ ರಾಷ್ಟ್ರ ನಿರ್ಮಾಣ ಮತ್ತು ನೈತಿಕ ಮೌಲ್ಯ ನಿರ್ಮಾಣ ಸಿದ್ಧಾಂತವನ್ನು ಅರ್ಥ ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಹಲವು ವರ್ಷಗಳು ಬೇಕು. ಬ್ರಿಟಿಷರ ಒಡೆದಾಳುವ ನೀತಿಯನ್ನು ಮಾತ್ರ ಬಿಜೆಪಿ ಮತ್ತು ಸಂಘ ಇಂದು ಬಳಸಿಕೊಳ್ಳುತ್ತಿಲ್ಲ. ಬದಲಾಗಿ ದ್ವೇಷ, ಕಹಿ ಭಾವನೆ ಮತ್ತು ವಿಭಜಕತೆಯನ್ನು ತೀವ್ರವಾಗಿ ಹರಡುತ್ತಿವೆ’ ಎಂದರು.

‘ಒಬ್ಬ ಸಹೋದರನನ್ನು ಮತ್ತೊಬ್ಬನ ಮೇಲೆ ಎತ್ತಿಕಟ್ಟುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ದೇಶದಲ್ಲಿದ್ದ ಸಾಮಾಜಿಕ ಸೌಹಾರ್ದತೆ, ಭ್ರಾತೃತ್ವ, ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹಾಳು ಮಾಡುತ್ತಿರುವವರು ಮತ್ತು ಹಾಳು ಮಾಡಲು ಸಂಚು ರೂಪಿಸುತ್ತಿರುವವರು ನಿಜ ಅರ್ಥದಲ್ಲಿ ತುಕ್ಡೇ ಗುಂಪು ಆಗಿದ್ದಾರೆ’ ಎಂದು ಮಧ್ಯಪ್ರದೇಶದ ಭಾರತ ಜೋಡಿಸಿ ಯಾತ್ರೆಯ ಮಾಧ್ಯಮ ಉಸ್ತುವಾರಿಯೂ ಆಗಿರುವ ರಾಗಿಣಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.