ADVERTISEMENT

ಔರಂಗಜೇಬನ ಆಡಳಿತಕ್ಕಿಂತ ಕೆಟ್ಟದಾಗಿದೆ ಮಹಾರಾಷ್ಟ್ರದ BJP ಸರ್ಕಾರ: ರಾವುತ್

ಪಿಟಿಐ
Published 14 ಮಾರ್ಚ್ 2025, 10:45 IST
Last Updated 14 ಮಾರ್ಚ್ 2025, 10:45 IST
<div class="paragraphs"><p>ಸಂಜಯ್ ರಾವುತ್</p></div>

ಸಂಜಯ್ ರಾವುತ್

   

ಮುಂಬೈ: ‘ಕೇಸರಿ ಪಕ್ಷದ ಆಡಳಿತದಿಂದಾಗಿ ರೈತರು ಸಾಯುತ್ತಿದ್ದಾರೆ. ಮಹಾರಾಷ್ಟ್ರದ ಬಿಜೆಪಿ ಸರ್ಕಾರವು ಔರಂಗಜೇಬನ ಆಡಳಿತಕ್ಕಿಂತ ಕೆಟ್ಟದಾಗಿದೆ’ ಎಂದು ಶಿವಸೇನಾ (ಯುಬಿಟಿ) ಮುಖಂಡ ಸಂಜಯ್ ರಾವುತ್ ಶುಕ್ರವಾರ ಆರೋಪಿಸಿದ್ದಾರೆ.

‘ರಾಜ್ಯದಲ್ಲಿ ರೈತರು, ನಿರುದ್ಯೋಗಿಗಳು ಹಾಗೂ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಔರಂಗಜೇಬ್ ಮೃತಪಟ್ಟು 400 ವರ್ಷಗಳಾಗಿವೆ. ಅವರನ್ನು ಮರೆತುಬಿಡಿ. ಆದರೆ, ಮಹಾರಾಷ್ಟ್ರದಲ್ಲಿ ರೈತರ ಸಾವಿಗೆ ಔರಂಗಜೇಬ ಕಾರಣವೇ? ಅವರ ಸಾವಿಗೆ ನೀವೇ ಕಾರಣ. ಮೊಘಲ್ ದೊರೆ ಒಂದೊಮ್ಮೆ ಅರಾಜಕತೆ ನಡೆಸಿದ್ದರು ಎಂದಾದರೆ, ನಿಮ್ಮ ಸರ್ಕಾರ ಮಾಡುತ್ತಿರುವುದೇನು?’ ಎಂದು ಬಿಜೆಪಿ ವಿರುದ್ಧ ಕಿಡಿಯಾಡಿದ್ದಾರೆ.

ADVERTISEMENT

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿಕೆ ನೀಡಿ, ‘ಛತ್ರಪತಿ ಸಾಂಭಾಜಿನಗರದಲ್ಲಿರುವ ಔರಂಗಜೇಬನ ಗುಮ್ಮಟ ತೆರವುಗೊಳಿಸಲು ಆಗ್ರಹಿಸಲಾಗುತ್ತಿದೆ. ಹಿಂದಿನ ಕಾಂಗ್ರೆಸ್ ಸರ್ಕಾರವು ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಗೆ ಇದನ್ನು ವಹಿಸಿದೆ. ಹೀಗಾಗಿ ಅದನ್ನು ಕಾನೂನು ಪ್ರಕ್ರಿಯೆ ಮೂಲಕವೇ ನಡೆಸಬೇಕು’ ಎಂದು ಹೇಳಿದ್ದರು.

ಮರಾಠಾ ದೊರೆ ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾದ ಸತಾರಾ ಕ್ಷೇತ್ರದ ಬಿಜೆಪಿ ಸಂಸದ ಉದಯನ್‌ರಾಜೆ ಭೋಸ್ಲೆ ಅವರು, ಛತ್ರಪತಿ ಸಾಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬನ ಗುಮ್ಮಟವನ್ನು ತೆರವುಗೊಳಿಸಲು ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.