ADVERTISEMENT

ಮಹಾ ಕಗ್ಗಂಟು| ರಾಜ್ಯಪಾಲರನ್ನು ಪ್ರತ್ಯೇಕವಾಗಿ ಭೇಟಿ ಮಾಡಲಿವೆ ಬಿಜೆಪಿ–ಶಿವಸೇನೆ

ಏಜೆನ್ಸೀಸ್
Published 28 ಅಕ್ಟೋಬರ್ 2019, 5:44 IST
Last Updated 28 ಅಕ್ಟೋಬರ್ 2019, 5:44 IST
   

ಮುಂಬೈ: ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆ ವಿಚಾರ ಬಿಜೆಪಿ ಮತ್ತು ಶಿವಸೇನೆ ನಡುವೆ ಭಿನ್ನಮತ ಸೃಷ್ಟಿಗೆ ಕಾರಣವಾಗಿದೆ. ಈ ನಡುವೆ ಎರಡೂ ಪಕ್ಷಗಳೂ ಸೋಮವಾರ ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿ ಮಾಡಲಿವೆ. ಇದಕ್ಕಾಗಿ ಸಮಯವನ್ನೂ ಕೇಳಿವೆ.

ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗಿಂತಲೂ ಕಡಿಮೆ ಸ್ಥಾನಗಳಲ್ಲಿ ಗೆದ್ದಿತ್ತು. ಕಳೆದ ಬಾರಿ ಒಂಟಿಯಾಗಿ ಸ್ಪರ್ಧಿಸಿ 120ಕ್ಕೂ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ 105 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ಅಲ್ಲದೇ, ಫಲಿತಾಂಶ ಬಂದ ಕೂಡಲೇ ಶಿವ ಸೇನೆ ಕೂಡ ಅಧಿಕಾರದ ಸಮಾನ ಹಂಚಿಕೆಗೆ ಪಟ್ಟು ಹಿಡಿದಿತ್ತು.
ಸದ್ಯ 50:50ರಂತೆ ಅಧಿಕಾರ ಹಂಚಿಕೆಯಾಗಬೇಕು ಎಂಬ ವಿಚಾರ ಮತ್ತು ಮುಖ್ಯಮಂತ್ರಿ ಸ್ಥಾನದ ಕುರಿತು ಚರ್ಚೆಗಳು ಬಿಜೆಪಿ ಮತ್ತು ಶಿವಸೇನೆ ನಡುವೆ ಮುನಿಸು ಸೃಷ್ಟಿ ಮಾಡಿವೆ.

ಈ ನಡುವೆ ಭಾನುವಾರ ಮಾತನಾಡಿರುವ ಎನ್‌ಡಿಎ ಮೈತ್ರಿ ಕೂಟದ ಮತ್ತೊಂದು ಮಿತ್ರ ಪಕ್ಷ ಆರ್‌ಪಿಐನ ಮುಖ್ಯಸ್ಥ ರಾಮದಾಸ ಅಟವಾಳೆ, ಶಿವಸೇನೆಯು ಉಪ ಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಳ್ಳಬೇಕು. ಆದಿತ್ಯ ಠಾಕ್ರೆ ಅವರನ್ನು ಡಿಸಿಎಂ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.